ಕನ್ನಡಿಗರೇ ಸ್ವಾಗತಿಸಿ -ಸಲ್ಮಾನ್

ಬೆಂಗಳೂರು, ಸೆ ೧೧- ಬಾಲಿವುಡ್‌ನ ಬಾಯಿಜಾನ್, ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲು ಮುಂದಾಗಿದ್ದು, ಸ್ವತಃ ಟ್ವಿಟರ್ ಖಾತೆಯಲ್ಲಿ ಕನ್ನಡಕ್ಕೆ ಬರುತ್ತಿದ್ದೇನೆ ನನ್ನನ್ನು ಸ್ವಾಗತಿಸಿ ಎಂದು ನಟ ಸಲ್ಮಾನ್ ಖಾನ್ ಮನವಿ ಮಾಡಿದ್ದಾರೆ.

ಈಗಾಗಲೇ ಬಾಲಿವುಡ್‌ನಲ್ಲಿ ದಬಾಂಗ್ ೩ ಭಾರಿ ನಿರೀಕ್ಷೆ ಮೂಡಿಸಿದ್ದು, ಅದೇ ಚಿತ್ರದ ಮೂಲಕ ನಟ ಸಲ್ಮಾನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ತವಕದಿಂದ ಕಾಯುತ್ತಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ಟ್ವೀಟರ್‌ನಲ್ಲಿ ಬಹಿರಂಗಪಡಿಸಿರುವ ನಟ ಸಲ್ಮಾನ್ ಖಾನ್ ದಬಾಂಗ್ ೩ ಚಿತ್ರದ ಮೋಷನ್ ಪೋಸ್ಟರ್ ಶೇರ್ ಮಾಡಿ ದಬಾಂಗ್-೩ ಕ್ರೇಜ್ ಈಗ ಕನ್ನಡದಲ್ಲೂ ನಮ್ಮನ್ನು ಸ್ವಾಗತಿಸಿ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರ ಮುಂದಿನ ಡಿ ೨೦ ರಂದು ಹಿಂದಿ, ಕನ್ನಡ,ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಆಗಲಿದೆ. ಸುದೀಪ್ ಕೂಡ ಸಲ್ಮಾನ್ ಖಾನ್ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಕನ್ನಡದಲ್ಲಿ ಚಿತ್ರವನ್ನು ಪ್ರಭುದೇವ ನಿರ್ದೇಶಿಸಿದ್ದಾರೆ.

ಸುದೀಪ್ ಹಾಗೂ ಸಲ್ಮಾನ್ ಖಾನ್ ನಟಿಸಿರುವ ಈ ದಬಾಂಗ್-೩ ಚಿತ್ರದ ಮೋಷನ್ ಪೋಸ್ಟರ್ ಇಂದು ರಿಲೀಸ್ ಆಗಿದೆ. ಈ ಪೋಸ್ಟರ್‌ನಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಸಲ್ಮಾನ್ ಖಾನ್ ತಾವೇ ಸ್ವತಃ ಟೈಮ್ ನಂದು ತಾರೀಖೂ ನಂದು ಅಂತ ಡೈಲಾಗ್ ಹೊಡೆದಿದ್ದು, ಡೈಲಾಗ್ ಕೇಳಿ ಕನ್ನಡ ಸಿನಿರಸಿಕರು ಫುಲ್ ಖುಷಿಯಾಗಿದ್ದಾರೆ.

Leave a Comment