ಕನ್ನಡಕ್ಕೆ ಬಂದ ಹಾಟ್ ಬೆಡಗಿ

ಪಂಜಾಬಿ ಚಿತ್ರದ ಮೂಲಕ ಚತ್ರರಂಗಕ್ಕೆ ಪಾದಾರ್ಪಣೆ ಮಾಡಿದ ’ಇಹಾನ ದಿಲ್ಲಾನ್ ಬಾಲಿವುಡ್ ಮೂಲಕ ಕನ್ನಡ ಚಿತ್ರರಂಗಕ್ಕೂ ಬಂದಿದ್ದಾರೆ. ಅವಕಾಶಗಳು ಸಿಕ್ಕರೆ ಕನ್ನಡದಲ್ಲಿಯೇ ಹೆಚ್ಚಾಗಿ ನಟಿಸುವ ಇಚ್ಚೆ ಇದೆ.

ಹಾಗಂತ ಇಹಾನ ದಿಲ್ಲಾನ್ ತಮ್ಮ ಮನದಾಳ ಹಂಚಿಕೊಂಡರು. ಯಾರೀ ಇಹಾನ ಅನ್ನುತ್ತೀರಾ.. ಪಂಜಾಬಿ ಚಿತ್ರ ’ಡ್ಯಾಡಿ ಕೂಲ್ ಮುಂದೆ ಕೂಲ್ ಚಿತ್ರದ ಮೂಲಕ ಬಣ್ಣದ ಜಗತ್ತು ಪ್ರವೇಶಿಸಿದ ಈಕೆ  ’ಟೈಗರ್,’ಥಗ್ನಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್‌ಗೂ ಅವಕಾಶ ಹುಡುಕಿಕೊಂಡು ಬಂದಿದೆ.ಅದುವೇ “ಹೇಟ್ ಸ್ಟೋರಿ-೪’. ಚಿತ್ರದಲ್ಲಿ ಮೈ ಚಳಿ ಬಿಟ್ಟು ನಟಿಸಿದ ಈಕೆಗೆ ಕನ್ನಡ ಚಿತ್ರರಂಗದಲ್ಲಿಯೂ ಬಾಗಿಲು ತೆರೆದುಕೊಂಡಿದೆ.

ಶಿವರಾಜ್ ಕುಮಾರ್ ಅವರೊಂದಿಗೆ ನಟಿಸುವ ವಿಶ್ವಾಸದಲ್ಲಿದ್ದಾರೆ, ಅಲ್ಲದೆ ಮತ್ತೊಂದು ಹೊಸಬರ ಚಿತ್ರದಲ್ಲಿಯೂ ನಟಿಸುವ ಅವಕಾಶ ಬಂದಿದ್ದು ಸದ್ಯದಲ್ಲಿಯೇ ಅಂತಿಮವಾಗಲಿದೆ ಎನ್ನುತ್ತಾರೆ ಇಹಾನ. ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ಹೇಟ್ ಸ್ಟೋರಿ-೪ ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ಇಹಾನ ದಿಲ್ಲಾನ್, ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸುವ ಆಸೆ ಇದೆ. ಅದಕ್ಕೆ ಪೂರಕ ಎನ್ನುವಂತೆ ಶಿವರಾಜ್ ಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಒದಗಿಬಂದಿದೆ. ಈ ಸಂಬಂಧ ಮಾತುಕತೆಯೂ ನಡೆದಿದೆ.

ಸದ್ಯದ ಜಾಹೀರಾತು ಮತ್ತು ಮಾಡಲಿಂಗ್‌ನಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದು, ಕನ್ನಡದಲ್ಲಿ ಅವಕಾಶಗಳು ಹೆಚ್ಚು ಬಂದರೆ ನಟಿಸುತ್ತೇನೆ. ನಟಿಯಾಗಿ ಉತ್ತಮ ಪಾತ್ರಗಳು ಮತ್ತು ಚಿತ್ರಗಳು ಬರುವುದನ್ನು ಎದುರು ನೋಡುತ್ತೇನೆ. ನನಗೆ ಯಾವದೇ ಭಾಷೆಯ ಗಡಿ ಇಲ್ಲ ಎನ್ನುತ್ತಾರೆ ಇಹಾನ.

Leave a Comment