ಕನ್ನಡಕ್ಕೆ ಬಂದ ಸಿಮ್ರಾನ್

ಸಿಮ್ರಾನ್ ನಟೇಕರ್ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಯಾರೀ ಸಿಮ್ರಾನ್ ಅನ್ನುತ್ತೀರಾ.. ಧೂಮ್ರಪಾನ ಮಾಡದಿರಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಪುಟ್ಟ ಬಾ ಈಕೆ.   ಹಿಂದಿಯ ಹಲವು ಜಾಹೀರಾತುಗಳಲ್ಲಿ  ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಚಿಕ್ಕ ವಯಸ್ಸಿನಲ್ಲಿ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಈಕೆ ’ಕಾಜಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.

ಸುಮನ್ ಕ್ರಾಂತಿ ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ಅನೇಕಲ್ ಬಾಲರಾಜ್ ಬಂಡವಾಳ ಹಾಕಿದ್ದು ಅವರ ಪುತ್ರ ಸಂತೋಷ್ ನಾಯಕ. ಚಿತ್ರದ ಬಗ್ಗೆ ಹೇಳಿಕೊಳ್ಳಲು ಕಳೆದವಾರ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.ಅಲ್ಲಿ ವಿವರ ನೀಡಿದ ನಿರ್ದೇಶಕರು, ಇದೊಂದು ಪಕ್ಕಾ ಸಂಗೀತ ಮಯ ಚಿತ್ರ.ಜೊತೆಗೆ ಪ್ರೇಮಕಥೆಗೂ ಒತ್ತು ನೀಡಲಾಗಿದೆ. ಕಾಜಲ್ ಎಂದರೆ ಬಹುತೇಕ ಗಂಡಸರಿಗೆ ಗೊತ್ತಿಲ್ಲ. ಹೆಚ್ಚಾಗಿ ಹೆಂಗಸರು ಬಳಸುತ್ತಾರೆ.

ಚಿತ್ರದಲ್ಲಿ ನಾಯಕಿಯ ಹೆಸರು ಕಾಜಲ್. ಹಾಗಾಗಿ ಚಿತ್ರಕ್ಕೆ ಆ ಹೆಸರು ಇಡಲಾಗಿದೆ.ಚಿತ್ರವನ್ನು ಕುಲು ಮನಾಲಿ,ಹೊನ್ನಾವರ ಸೇರಿದಂತೆ ಚಿತ್ರೀಕರಣ ಮಾಡಲಾಗುವುದು ಮನರಂಜನೆಗೆ ಚಿತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.ಐದು ಹಾಡುಗಳಿದ್ದು ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಬರಲಿದೆ. ಅದರ ಸಾರಥ್ಯವನ್ನು ಗುರುಕಿರಣ್ ವಹಿಸಿಕೊಂಡಿದ್ದಾರೆ ಎಂದು ವಿವರ ನೀಡಿದರು.

ಸಿಮ್ರಾನ್ ಮಾತನಾಡಿ, ಹಿಂದಿಯಲ್ಲಿ ೧೪೦ ಜಾಹೀರಾತುಗಳು ಮತ್ತು ಐದಾರು ಹಿಂದಿಯ ಚಿತ್ರಗಳಲ್ಲಿ ನಟಿಸಿದ್ದೇನೆ. ಮೊದಲಿನಿಂದಲೂ ದಕ್ಷಿಣ ಭಾರತ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇತ್ತು ಈಗ ಅದು ನೆರವೇರಿದೆ. ಚಿತ್ರದಲ್ಲಿ ನನ್ನದು ಅನಿವಾಸಿ ಭಾರತೀಯನ ಪಾತ್ರ ಎಂದು ವಿವರ ನೀಡಿದರು. ನಾಯಕ ಸಂತೋಷ್,ಹಳ್ಳಿ ಹುಡುಗನ ಪಾತ್ರ ನನ್ನದು. ವಿಭಿನ್ನ ಪಾತ್ರವಿದೆ. ಚಿತ್ರರಂಗದಲ್ಲಿ ನೆಲೆ ನಿಲ್ಲಿಸಲಿದ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಗುರುಕಿರಣ್,ಚಿತ್ರದಲ್ಲಿ ಐದು ಹಾಡುಗಳಿವೆ ಎಂದರು.ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್ ಮತ್ತಿತರಿದ್ದರು.

Leave a Comment