ಕನ್ನಡಕ್ಕೆ ಬಂದ ರಾಧಿಕಾ ಅಮ್ಮ ಮಗಳ ಸಂಘರ್ಷ

ತಮಿಳು ಚಿತ್ರರಂಗದ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಕನ್ನಡದ ಕಿರುತೆರೆ ಲೋಕಕ್ಕೆ ಪ್ರವೇಶಿಸಿದ್ದಾರೆ. ಈ ಮೂಲಕ ಪತಿಯಂತೆ ಪತ್ನಿಯೂ ಕನ್ನಡಕ್ಕೆ ಬಂದಿದ್ದಾರೆ.

ಕನ್ನಡ ಕಿರುತೆರೆ ಲೋಕಕ್ಕೆ ತಮಿಳು ಚಿತ್ರರಂಗದ ನಟಿ, ನಿರ್ಮಾಪಕಿ ರಾಧಿಕಾ ಶರತ್ ಕುಮಾರ್ ಆಗಮಿಸಿದ್ದಾರೆ. ಅದುವೇ ಚಂದ್ರಕುಮಾರಿಯ ಮೂಲಕ

inakunota-photo-9-1-19ಹಿರಿಯ ನಟ ಶರತ್ ಕುಮಾರ್ ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಇದೀಗ ಪತ್ನಿ ರಾಧಿಕಾ ಸರಧಿ.ಅಮ್ಮ ಮಗಳ ಶತಮಾನಗಳ ಸಂಘರ್ಷವನ್ನು ತೆರೆಯ ಮೇಲೆ ಕಟ್ಟಿಕೊಡುವ ’ಚಂದ್ರಕುಮಾರಿ’ ಮೂಲಕ ಕನ್ನಡಿಗರ ಮನೆ ಮನಗಳಿಗೆ ಬರುತ್ತಿದ್ದಾರೆ.

ಹಿರಿಯ ಕಲಾವಿದರಾದ ಅರುಣ್ ಸಾಗರ್,ಶೋಭಾ ನಾಯ್ಡು ಸೇರಿದಂತೆ ದೊಡ್ಡ ಕಲಾವಿದರ ದಂಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪಕ್ಕಾ ಫ್ಯಾಂಟಿಸಿ ಕತೆಯನ್ನು ಚಂದ್ರಕುಮಾರಿ ಸಾರಿ ಹೇಳಲು ಮುಂದಾಗಿದೆ.

ಶತಮಾನಗಳ ಹಿಂದೆ ನಡೆದು ಹೋಗಿದ್ದ್ದ ಅಮ್ಮ ಮಗಳ ನಡುವಿನ ಸಂಘರ್ಷದ ಕಥೆಗೆ ಮತ್ತೆ ಮರು ಜೀವ ಸಿಕ್ಕರೆ ಆಗಬಹುದಾದ ಘಟನೆಗಳೇನು ಏನು ಎನ್ನುವುದೇ ಚಂದ್ರಕುಮಾರಿ ಜೀವಾಳ. ಇದರ ಜೊತೆಗೆ ಸಂಬಂಧಗಳ ಮಹತ್ವ, ಪ್ರೀತಿ, ಆಕ್ಷನ್‌ಗೆ ಆದ್ಯತೆ ನೀಡಲಾಗಿದೆ.

ಯುವ ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಥೆ ಹೆಣೆಯಲಾಗಿದ್ದು ಗುಣಮಟ್ಟದಲ್ಲೂ ಅದ್ದೂರಿತನ ಪ್ರದರ್ಶಿಸಲಾಗಿದೆ.ಕುತೂಹಲ ಕೆರಳಿಸುವ ಚಿತ್ರಕಥೆ, ಮೊನಚಾದ ಸಂಭಾಷಣೆ ಹಾಗೂ ಗುಣಮಟ್ಟದ ಚಿತ್ರೀಕರಣ, ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿರುವ ಗ್ರಾಫಿಕ್ಸ್‌ಗೆ ಆದ್ಯತೆ ನೀಡಲಾಗಿದೆ.

ನಂದಿನಿ, ಜೈ ಹನುಮಾನ್‌ನಂಥ ಧಾರಾವಾಹಿಗಳನ್ನು ನಿರ್ಮಿಸಿ ಕಿರುತೆರೆಲೋಕದಲ್ಲಿ ದಾಖಲೆ ಬರೆದ ಉದಯ ಟಿವಿ ’ಚಂದ್ರಕುಮಾರಿ’ ಮೂಲಕ ಮತ್ತೊಂದು ಮೈಲಿಗಲ್ಲು ಮುಟ್ಟುವ ಸನಿಹದಲ್ಲಿದೆ. ದಕ್ಷಿಣ ಭಾರತದ ನಿರ್ಮಾಣ ಸಂಸ್ಥೆ ರಡಾನ್, ನಿರ್ಮಾಣದ ಜವಬ್ದಾರಿ ಹೊತ್ತಿದ್ದು ಇದೇ ಸೋಮವಾರದಿಂದ ಚಂದ್ರಕುಮಾರಿ ಆರಂಭವಾಗಿದೆ.

Leave a Comment