ಕನ್ನಡಕ್ಕೆ ಬಂದರು ಜಾನಿ ಲಿವರ್

ಕನ್ನಡದ ಮೂಲಕ ದಕ್ಷಿಣ ಭಾರತದ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುತ್ತಿರುವುದನ್ನು ಹಿಂದಿಯ ಖ್ಯಾತ ಕಲಾವಿದ ಜಾನಿ ಲಿವರ್ ಅವರು ಖುಷಿಯಾಗಿ ಹೇಳಿದ್ದರು. ಗರ ಚಿತ್ರದಲ್ಲಿ ಅವರು ಕಾಮಿಡಿಯನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮಿಂದ ಸಾಧ್ಯವಾದ ಮಟ್ಟಿಗೆ ಕನ್ನಡದಲ್ಲಿ ಮಾತನಾಡಿದ್ದು ಅವರ ವೃತ್ತಿ ಬದ್ಧತೆಗೆ ಕನ್ನಡಿ ಹಿಡಿಯಿತು.

ಮೂಲತಃ ಆಂಧ್ರ ಪ್ರದೇಶದವರಾದ ಅವರು ಸಮಯ ಸಿಗದ ಕಾರಣ ಈ ಮೊದಲು ತಮಿಳು ಮತ್ತು ತೆಲುಗು ಚಿತ್ರಗಳಿಗೆ ಕೇಳಿದ್ದರೂ ನಟಿಸಲು ಸಾಧ್ಯವಾಗಿರಸಲಿಲ್ಲವಂತೆ. ಸಾಧುಕೋಕಿಲ ಕಾಂಭೀನೇಷನ್‌ನಲ್ಲಿ ಅವರು ಗರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಮುರಳಿ ಕೃಷ್ಣ ಅವರು ಆರ್. ಕೆ. ನಾರಯಣ್ ಅವರ ಕಥೆಯಲ್ಲಿನ ಒಂದು ವಾಕ್ಯದಲ್ಲಿರುವ ಎಳೆಯನ್ನು ಕಥೆ ಮಾಡಿಕೊಳ್ಳಲಾಗಿದೆ ಎಂದಷ್ಟೇ ಹೇಳಿ ಕಥೆಯನ್ನು ಗೌಪ್ಯವಾಗಿರಿಸಿದರು.

ಈ ಕಾರಣದಿಂದಾಗಿ ಚಿತ್ರದಲ್ಲಿ ಮೊದಲ ಬಾರಿಗೆ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿರುವ ಬಿಗ್‌ಬಾಸ್‌ನಿಂದ ಹೆಸರಾಗಿರುವ ನಿರೂಪಕ ರಹಮಾನ್ ಹಾಸನ ಕೂಡ ಹೆಚ್ಚು ಮಾತನಾಡಲಿಲ್ಲ. ಸಿನೆಮಾದಲ್ಲಿ ನಟಿಸುತ್ತಿರುವ ಖುಷಿ ಅವರಲ್ಲಿತ್ತು. ಚಿತ್ರದ ಮೂಹೂರ್ತ ಇತ್ತೀಚೆಗೆ ನಡೆದಿದ್ದು ಚಿತ್ರತಂಡ ಚಿತ್ರೀಕರಣದಲ್ಲಿ ನಿರತವಾಗಿದೆ.

Leave a Comment