ಕನ್ನಡಕ್ಕೂ ಬಂತು ಧೂಮ್

ಬಾಲಿವುಡ್ ಚಿತ್ರರಂಗದಲ್ಲಿ ತೆರೆಗೆ ಬಮದು ಯಶಸ್ವಿಯಾಗಿದ್ದ ‘ಧೂಮ್ ಚಿತ್ರ ಅದೇ ಹೆಸರಲ್ಲಿ  ಸೆಟ್ಟೇರಿದೆ. ಚಿತ್ರರಂಗದಲ್ಲಿ ಹಲವು ನಿರ್ದೇಶಕ ಬಳಿ ಕೆಲಸ ಮಾಡುತ್ತಿದ್ದ ರಾಜೇಶ್ ವರ್ಮಾ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ ಅದುವೇ ‘ಧೂಮ್’.

dhoom_118

ಅಂದಹಾಗೆ ಬಾಲಿವುಡ್ ಧೂಮ್‌ಗೂ ಕನ್ನಡದ ಧೂಮ್‌ಗೂ ಸಂಬಂಧವಿಲ್ಲ ಎನ್ನುವುದನ್ನು ಮೊದಲಿಗೆ ನಿರ್ದೇಶಕ ರಾಜೇಶ್ ಸ್ಪಷ್ಟಪಡಿಸಿದರು. ಸಮಾಜಿಕ ಸಮಸ್ಯೆಯನ್ನು ಮುಮದಿಟ್ಟುಕೊಂಡು ಚಿತ್ರ ಮಾಡಲಾಗುತ್ತಿದೆ. ಅದರಿಂದ ಎದುರಾಗುವ ಸಮಸ್ಯೆಗಳ ಸುತ್ತ ಚಿತ್ರ ಮಾಡಲಾಗುತ್ತಿದೆ.

ದುಬಾರಿ ವೆಚ್ಚದಲ್ಲಿ ಟರ್ಕಿ, ಲಂಡನ್ ಮತ್ತು ಬಾಂಬೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗುವುದು.ಚಿತ್ರದಲ್ಲಿ ನಾಯಕನ ತಂಗಿ ಮಹಾಮಾರಿ ಕ್ಯಾನ್ಸರ್ ರೋಗದಿಂದ ಬಳಲಿ ಸತ್ತು ಹೋಗುತ್ತಾಳೆ ಆಕೆಯನ್ನು ಕಾಪಾಡಲು ನಾಯಕ ಪಡುವ ಪಾಡು ಮತ್ತು ಅದರ ಸುತ್ತ ಚಿತ್ರೀಕರಣ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳನ್ನು ಬೇರೆಯವರು ಎದುರಿಸಬಾರದೆನ್ನುವ ಕಾರಣಕ್ಕಾಗಿ ಆತ ತನ್ನ ಸಂಗಡಿಗರೊಂದಿಗೆ ಬ್ಯಾಂಕ್ ದರೋಡೆ ಮಾಡಲು ಮುಂದಾಗುತ್ತಾನೆ. ಒಳ್ಳೆಯ ಕೆಲಸಕ್ಕಾಗಿ ಅತ ಮಾಡುವ ಕೆಲಸ ಮುಂದೇನಾಗಲಿ ಎನ್ನುವುದನ್ನು ಚಿತ್ರದ ಮೂಲಕ ಹೇಳಲಾಗುತ್ತಿದೆ ಎನ್ನುವ ವಿವರ ನೀಡಿದರು.

dhoom_144ದೆಹಲಿಯ ಉದ್ಯಮಿ ಮುನ್ನ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದು, ಕನ್ನಡ ಚಿತ್ರಗಳ ಮೇಲಿನ ಅಭಿಮಾನದಿಂದ ಬಂಡವಾಳ ಹಾಕಿದ್ದೇನೆ. ಒಳ್ಳೆಯ ಚಿತ್ರ ನೀಡುವುದು ನಮ್ಮ ಉದ್ದೇಶ. ಹೀಗಾಗಿ ಚಿತ್ರದ ಬಜೆಟ್ ಬಗ್ಗೆ ಚಿಂತಿಸುವುದಿಲ್ಲ.ಚಿತ್ರಕ್ಕೆ ಅಗತ್ಯವಾಗಿರುವಷ್ಟು ಹಣಕಾಸು ಒದಗಿಸುವುದಾಗಿ ತಿಳಿಸಿದರು.

ನಾಯಕಿಯರಲ್ಲಿ ಒಬ್ಬರಾದ ಪಾಟಲಿ, ಚಿತ್ರಕ್ಕಾಗಿ ಬೈಕ್ ರೈಡ್ ಕಲಿಯುತ್ತಿದ್ದೇನೆ. ಒಳ್ಳೆಯ ಪಾತ್ರ ಎಂದು ತಮ್ಮ ಪಾತ್ರದ ಬಗ್ಗೆ ವಿವರ ನೀಡಿದರೆ ಸಂಗೀತ ನೀರ್ದೇಶಕ ಗುರುಕಿರಣ್, ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿವೆ ಎಂದರು. ಅಂದಹಾಗೆ ನಾಲ್ಕು ಹುಡುಗರು ಮತ್ತು ಇಬ್ಬರ ಹುಡುಗಿಯರ ಸುತ್ತ ನಡೆಯುವ ಕಥೆ ಇದಾಗಿದೆ.

Leave a Comment