ಕನ್ನಡಕ್ಕೂ ಬಂತು ಧೂಮ್ ರಾಬರಿಯ ಕಥನ

ಬಾಲಿವುಡ್‌ನಲ್ಲಿ ತೆರೆಗೆ ಬಂದಿದ್ದ ’ಧೂಮ್’ ಅದೇ ಹೆಸರಲ್ಲಿ ಕನ್ನಡದಲ್ಲಿಯೂ ಮೂಡಿ ಬರುತ್ತದೆ.ಅಂದಹಾಗೆ ಈ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ’ಧೂಮ್’ ಎಗೈನ್ ಚಿತ್ರದ ಮೂಲಕ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಗರಡಿಯಲ್ಲಿ ಪಳಗಿದ ಪ್ರತಿಭಾವಂತ ರಾಜೇಶ್ ವೆರ್ಮಾ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

inakunota-1-01ಕಳೆದ ಹಲವು ವರ್ಷಗಳಿಂದ ಓಂಪ್ರಕಾಶ್ ಸೇರಿದಂತೆ ಹಲವರ ಬಳಿ ಕೆಲಸ ಮಾಡಿದ ಅನುಭವವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ.ಚಿತ್ರವನ್ನು ಟರ್ಕಿಮ ಲಂಡನ್ ಮತ್ತು ಬಾಂಬೆ ಸೇರಿದಂತೆ ವಿವಿದೆಡೆ ಚಿತ್ರೀಕರಿಸಲು ಮುಂದಾಗಿದ್ದಾರೆ.

ಧೂಮ್ ಐವರು ಹುಡುಗರ ಕಥೆ. ಹೀಗಾಗಿ ಹೊಸ ಹುಡುಗರನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನು ನಾಯಕಿಯರ ಪೈಕಿ ಪಾಟಲಿ ಆಯ್ಕೆ ಯಾಗಿದ್ದು ಕತೆಗೆ ಹೊಂದುತ್ತಾರೆ ಎಂದು ಹೇಳಿಕೊಂಡರು ನಿರ್ದೇಶಕ ರಾಜೇಶ್.

ಓಂ ಪ್ರಕಾಶ್ ಅವರೊಂದಿಗೆ ಲಾಕಪ್ ಡೆತ್ ಚಿತ್ರದಿಂದ ಕೆಲಸ ಮಾಡಿದ್ದೇನೆ. ಅವರ ಕೆಲಸ ಕಾರ್ಯವಿಧಾನದ ಗೊತ್ತಿದೆ. ಜೊತೆಗೆ ಎಂ.ಎಸ್ ರಮೇಶ್ ಸೇರಿದಂತೆ ಹಲವು ನಿರ್ದೇಶಕರ ಜೊತೆಗಿನ ಅನುಭವವನ್ನು ಒಟ್ಟುಗೂಡಿಸಿ ಒಳ್ಳೆಯ ಚಿತ್ರ ಮಾಡುತ್ತೇನೆ ಎನ್ನುವ ನಂಬಿಕೆಯಿಂದ ಕೆಲಸ ಆರಂಬಿಸಿದ್ದೇನೆ. ನಟ.ನಟಿಯರು ಹೊಸಬರಾದರೂ ತಂತ್ರಜ್ಞರ ತಂಡ ಹಳೆಯದಿದೆ. ಗುರುಕಿರಣ್ ಸೇರಿದಂತೆ ಇಡೀ ತಂಡ ಬೆನ್ನೆಲುಬಾಗಿ ನಿಂತಿದೆ.

ಇದು ಚಿತ್ರತಂಡಕ್ಕೆ ಆನೆ ಬಲ ಬಂದಿದೆ. ಮೊದಲ ಚಿತ್ರವಾಗಿರುವುದರಿಂದ ಜನರಿಗೆ ತಲುಪುವಂತಹ ಚಿತ್ರ ಮಾಡಬೇಕೆನ್ನುವುದು ನಮ್ಮ ಉದ್ದೇಶ ಹಾಗಾಗಿ ಇಡೀ ತಂಡ ಶ್ರಮಿಸುತ್ತಿದ್ದೇವೆ.

ಚಿತ್ರಕ್ಕೆ ಧೂಮ್ ಎಗೈನ್ ಅಂತ ಹೆಸರಿಟ್ಟಿದ್ದೇವೆ, ಸದ್ಯದಲ್ಲಿಯೇ ದೊಡ್ಡ ಮಟ್ಟದಲ್ಲಿ ಚಿತ್ರದ ಶೀರ್ಷಿಕೆ ಅನಾವರಣ ಮಾಡುವ ಉದ್ದೇಶವಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಕೊಲೆಯ ಸುತ್ತ ಚಿತ್ರದ ಕತೆ ಸಾಗಲಿದೆ. ಒಳ್ಳೆಯ ಚಿತ್ರ ನೀಡುವ ಉದ್ದೇಶ ನಮ್ಮದು ಅದಕ್ಕೆ ಎಲ್ಲರ ಸಹಕಾರ ಬೇಕು ಎನ್ನುತ್ತಾರೆ ಅವರು.
ಕೊಲೆ,ನೆಗೆಟೀವ್, ಅಂಶ, ಆಕ್ಷನ್ ಥ್ರಿಲ್ಲರ್ ಹೀಗೆ ಹಲವು ಅಂಶಗಳ ಮಿಶ್ರಣ ಚಿತ್ರದಲ್ಲಿದೆ.

ಬಾಲಿವುಡ್‌ನಲ್ಲಿ ತೆರೆಗೆ ಬಂದು ಯಶಶ್ವಿಯಾಗಿದ್ದ ಧೂಮ್ ಅದೇ ಹೆಸರಲ್ಲಿನಲ್ಲಿ ಕನ್ನಡದಲ್ಲಿ ಬರುತ್ತಿದೆ. ಆದರೆ ಆ ಕಥೆ ಬೇರೆ ಈ ಕಥೆಯೇ ಬೇರೆ ಇದೊಂದು ರಾಬರಿ ಕಥೆಯನ್ನಾಧರಿಸಿದ ಹೊಸ ಕಲಾವಿದರ ಕಥೆ ಎನ್ನುತ್ತಾರೆ ನಿರ್ದೇಶಕ ರಾಜೇಶ್ ವೆರ್ಮಾ.

Leave a Comment