ಕನಸಿನ ಹಿಂದೆ ಬಾಬು

ಹಿರಿಯ ನಿರ್ದೇಶಕ ದಿನೇಶ್ ಬಾಬು ’ಹಗಲು ಕನಸಿನ’ ಹಿಂದೆ ಬಿದ್ದಿದ್ದಾರೆ.ಹೀಗಾಗಿ ಕಂಡ ಕನಸನ್ನು ನನಸು ಮಾಡಿಕೊಳ್ಳಲು ಹಲವರ ಸಹಾಯ ಪಡೆದಿದ್ದಾರೆ. ಅರ್ಥಾತ್ ದಿನೇಶ್ ಬಾಬು ಹೊಸ ಚಿತ್ರದ ಹೆಸರು “ಹಗಲು ಕನಸು”.

ಹಂಚಿಕೆದಾರರಾದ ಪದ್ಮನಾಭ, ಅಚ್ಯುತರಾಜ್ ಮತ್ತು ರೆಹಮಾನ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ನೀನಾಸಂ ಅಶ್ಚಥ್, ಮಾಸ್ಟರ್ ಆನಂದ್, ಅಶ್ವಿನ್ ಹಾಸನ್, ಅರುಣ್,ಸನಿಹಾ ಯಾದವ್,ವಾಣಿಶ್ರೀ ಕಾಣಿಸಿಕೊಳ್ಳುತ್ತಿದ್ದು ತಾಯಿಯ ಪಾತ್ರದಲ್ಲಿ ಚಿತ್ಕಲಾ ಬಿರಾದಾರ್ ಕಾಣಿಸಿಕೊಳ್ಳುತ್ತಿದ್ದಾರೆ.

hagalu-kanasu_106

ಕಳೆದವಾರ ಚಿತ್ರದ ಹಾಡುಗಳ ಧ್ವನಿ ಮುದ್ರಣ ಕಾರ್ಯಕ್ರಮವಿತ್ತು.ಅಲ್ಲಿ ಮಾತಿಗಿಳಿದ ನಿರ್ದೇಶಕ ದಿನೇಶ್ ಬಾಬು, ಪದೇ ಪದೇ ಕನಸು ಬೀಳುತ್ತಿತ್ತು. ಆ ಕನಸನ್ನು ಆಧರಿಸಿ ಚಿತ್ರ ಮಾಡಲಾಗುತ್ತಿದೆ.ಆ ಕನಸು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು ಎಂದರು.

hagalu-kanasu_113ಚಿತ್ರದಲ್ಲಿ ಹಿರಿಯ ಕಲಾವಿದ ಮನ್‌ದೀಪ್ ರಾಯ್, ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದುದ್ದಕ್ಕೂ ನಕ್ಕು ನಗಿಸಲಿದ್ದಾರೆ. ಅರಸೀಕೆರೆಯ  ಮನೆಯೊಮದರಲ್ಲಿ ಚಿತ್ರವನ್ನು ಚಿತ್ರೀಕರಿಸುವ ಉದ್ದೇಶವೊಂದಲಾಗಿದೆ. ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಅದಕ್ಕಾಗಿ ಎಲ್ಲ ಕಲಾವಿದರು ಕಯಜೋಡಿಸಿದ್ದಾರೆ ಎಂದು ವಿವರ ನೀಡಿದರು.

ನಟರಾದ ಮಾಸ್ಟರ್ ಆನಂದ್ ಒಳ್ಳೆಯ ಕತೆ ಸಿಕ್ಕಿದೆ. ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಬಹಳ ದಿನಗಳ ನಂತರ ಮರಳಿ ಬಂದಿರುವ ದಿನೇಶ್ ಬಾಬು ಮತ್ತೊಮ್ಮೆ ಚಂದನವನದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಮುಂದಾಗಿದ್ದು, ಅದಕ್ಕೆ ಹಗಲು ಕನಸು ಚಿತ್ರ ನೆರವಾಗಲಿದೆ ಎಂದೇ ಭಾವಿಸಲಾಗಿದೆ.

Leave a Comment