ಕನಕ ಅಣ್ಣವ್ರಾ ಅಭಿಮಾನಿ

– ಚಿಕ್ಕನೆಟಕುಂಟೆ ಜಿ.ರಮೇಶ್
ಸ್ಟಾರ್ ಕ್ರಿಯೇಟರ್ ಎಂದೇ ಚಿತ್ರರಂಗದಲ್ಲಿ ಹೆಸರು ಪಡೆದಿರುವ ನಿರ್ದೇಶಕ,ನಿರ್ಮಾಪಕ ಆರ್.ಚಂದ್ರು ಇದೀಗ ಹೊಸ ಮಾದರಿಯ ಚಿತ್ರ ಕೈಗೆತ್ತಿಕೊಂಡಿದ್ದಾರೆ ಅದುವೇ “ಕನಕ”.

ಆರ್. ಚಂದ್ರು ಮತ್ತು ದುನಿಯಾ ವಿಜಯ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ  ಬಹು ನಿರೀಕ್ಷೆಯ ’ ಕನಕ ’ಅಣ್ಣಾವ್ರ ಅಭಿಮಾನಿ ಚಿತ್ರಕ್ಕೆ ಭರದ ಚಿತ್ರೀಕರಣ ಬೆಂಗಳೂರಿನಲ್ಲಿ ಸಾಗಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದು ಎರಡನೇ ಹಂತದ ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಿನರ್ವಮಿಲ್ ನಲ್ಲಿ ಅದ್ಧೂರಿ ಸೆಟ್ ಹಾಕಲಾಗಿದ್ದು ಕಳೆದ ಏಳೆಂಟು  ದಿನಗಳಿಂದ ೩೦ಕ್ಕೂ ಹೆಚ್ಚು ಸಾಹಸ ಕಲಾವಿದರನ್ನು ಬಳಸಿಕೊಂಡು ಜಾಕಿಚಾನ್ ಮಾದರಿಯಲ್ಲಿ ಚಿತ್ರದ ಫೈಟ್ ದೃಶ್ಯಗಳನ್ನು ನಿರ್ಮಾಪಕರೂ ಆಗಿರುವ ನಿರ್ದೇಶಕ ಆರ್. ಚಂದ್ರು ಮಾರ್ಗದರ್ಶನದಲ್ಲಿ ಸಾಹಸ ನಿರ್ದೇಶಕ  ಡಿಫರೆಂಟ್ ಡ್ಯಾನಿ  ನೈಜವಾಗಿ ಚಿತ್ರೀಕರಿಸುತ್ತಿದ್ದರು.

ಕಳೆದವಾರ ಚಿತ್ರದ ಚಿತ್ರೀಕರಣದ ಸ್ಥಳಕ್ಕೆ ಪತ್ರಕರ್ತರನ್ನು ಚಿತ್ರತಂಡ ಆಹ್ವಾನಿಸಿತ್ತು. ಅಲ್ಲಿ ’ಕನಕ’ನ ಗುಣಗಾನ ಮಾಡಲಾಯಿತು. ಮೊದಲು ಮಾತಿಗಿಳಿದ ಆರ್. ಚಂದ್ರು, ಕನಕ ವಿಭಿನ್ನ ಮಾದರಿಯ ಚಿತ್ರ. ಅಣ್ಣವ್ರಾ ಅಭಿಮಾನಿಯೊಬ್ಬರ ಆಟೋ ಚಾಲಕನ ಕಥೆಯನ್ನಾಧರಿಸಿ ಚಿತ್ರ ಮಾಡಲಾಗುತ್ತಿದೆ. ಆಟೋ ಚಾಲಕರಾಗಿ  ದುನಿಯಾ ವಿಜಯ್ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ವಿವಿಧೆಡೆ ಸೆಟ್ ಹಾಕಿ ಈಗಾಗಲೇ ೨೦ ಕ್ಕೂ ಹೆಚ್ಚು ದಿನ ಚಿತ್ರೀಕರಣ ಮಾಡಲಾಗಿದೆ ಇನ್ನೂ ೬೦ ದಿನಗಳ ಕಾಲ ಚಿತ್ರೀಕರಣ ಮಾಡುವ ಉದ್ದೇಶವಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸುವ ಉದ್ದೇಶವಿದೆ. ದುನಿಯಾ ವಿಜಯ್ ಅವರ “ಮಾಸ್ತಿಗುಡಿ” ಚಿತ್ರ ಬಿಡುಗಡೆಗೆ ಆದ ಬಳಿಕ ಕನಕನನ್ನು ತೆರೆಗೆ ಉದ್ದೇಶವಿದೆ.ಈ ನಿಟ್ಟಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ.ಕನಕ ಉತ್ತಮ ಚಿತ್ರವಾಗಲಿದೆ ಎನ್ನುವ ವಿಶ್ವಾಸ ಅವರದು.

ಕನಕ ಎಂದರೆ ಬಂಗಾರ ಎಂದರ್ಥ,ಚಿತ್ರ ಬಂಗಾರದಷ್ಟೇ ಕಥೆ ಚೆನ್ನಾಗಿದೆ. ಅಭಿಮಾನಿಗಳಿಗೆ ಚಿತ್ರ ಇಷ್ಟವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ದುನಿಯಾ ವಿಜಯ್ ಅವರಿಗೆ ಹೇಳಿ ಮಾಡಿಸಿದ ಕಥೆ. ಚಿತ್ರದಲ್ಲಿ ರಾಜ್‌ಕುಮಾರ್ ಅವರ ಕೆಲ ಆದರ್ಶಗಳನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಚಿತ್ರ ನೋಡುವ ಪ್ರೇಕ್ಷಕರು ರಾಜ್‌ಕುಮಾರ್ ಅವರ ಮತ್ತೊಂದು ಚಿತ್ರ ಎನ್ನುವ ಮಟ್ಟಿಗೆ ಭಾಸವಾಗಲಿದೆ.

ಚಿತ್ರದಲ್ಲಿ ಮಾನ್ವಿತಾ ಹರೀಶ್ ನಾಯಕಿಯಾಗಿದ್ದು ಮತ್ತೊಬ್ಬ ನಾಯಕಿಗಾಗಿ ಆಯ್ಕೆ ನಡೆಯುತ್ತಿದೆ.ಒಳ್ಳೆಯ ಚಿತ್ರ ನೀಡುವ ಉದ್ದೇಶವಿದೆ ಎಂದು ಹೇಳಿಕೊಂಡರು ಆರ್.ಚಂದ್ರು.

ನಟ ದುನಿಯಾ ವಿಜಯ್, ನಿರ್ದೇಶಕ ಆರ್.ಚಂದ್ರು ಅವರು ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರ ಕ್ಯಾಂಪ್‌ನಲ್ಲಿದ್ದಾಗಿನಿಂದ ಪರಿಚಯವಿತ್ತು. ಜೊತೆಗೆ ಅವರೊಂದಿಗೆ ಚಿತ್ರ ಮಾಡುವ ಆಸೆ ಇತ್ತು.

ಅದು ಈಗ ಈಡೇರಿದೆ. ಚಿತ್ರದಲ್ಲಿ ನನ್ನದು ಆಟೋ ಚಾಲಕನ ಪಾತ್ರ. ಇದುವರೆಗೂ ಮಾಡದಿರುವ ವಿಭಿನ್ನ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ. ಮಾಸ್ತಿಗುಡಿ ಚಿತ್ರದ ಬಳಿಕ ಕನಕ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ಅವರದು. ಚಿತ್ರದಲ್ಲಿ ರಂಗಾಯಣ ರಘು, ಉಗ್ರಂ ಮಂಜು ಸೇರಿದಂತೆ ಅನೇಕ ಕಲಾವಿದರಿದ್ದಾರೆ.

Leave a Comment