ಕದ್ದು-ಮುಚ್ಚಿ ಮದುವೆಯಾದರೇ ಕನ್ನಡದ ನಟಿ ನಿತ್ಯ ಮೆನನ್

ಬೆಂಗಳೂರು, ನ ೧- ಕನ್ನಡದ ಮೈನಾ ಬೆಡಗಿ, ಬಹುಭಾಷೆ ನಟಿ ನಿತ್ಯ ಮೆನನ್ ಕದ್ದು ಮಚ್ಚಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಈ ಸುದ್ದಿ ಕೇಳಿ ಕನ್ನಡ ಅಭಿಮಾನಿಗಳಿಗೆ ಕೊಂಚ ಗೊಂದಲ ಉಂಟು ಮಾಡಿದೆ.

ತಮಿಳು ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿರುವ ಲೇಖನದಲ್ಲಿ ಮೈನಾ ಬೆಡಗಿಗೆ ಶ್ರೀಮತಿ ನಿತ್ಯ ಮೆನನ್ ಎಂದು ಸಂಭೋಧಿಸಿರುವುದು ಈ ವೈರಲ್ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡುವಂತೆ ಮಾಡಿದೆ ಹೌದು ತಮಿಳು ಪತ್ರಿಕೆಯಲ್ಲಿ ದಿ. ಮಾಜಿ ಸಿಎಂ ಜಯಲಲಿತ ಅವರ ಬಗ್ಗೆ ಲೇಖನ ಬರೆದಿದ್ದವರು ನಿತ್ಯ ಮೆನನ್ ಕುರಿತು ಬರೆದಿರುವ ಲೇಖನದಲ್ಲಿ ಶ್ರೀಮತಿ ನಿತ್ಯ ಎಂದು ಸಂಭೋದಿಸಿದ್ದಾರೆ. ದಾಖಲೆಯಿಲ್ಲದೇ ಅವರು ಯಾವುದೇ ಲೇಖನ ಬರೆಯುವುದಿಲ್ಲ ಎಂದು ಅಭಿಪ್ರಾಯಗಳು ಇವೆ.

ಅದ್ಭುತ ನಟನೆ, ಗಾಯನದ ಮೂಲಕ ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾದ ನಿತ್ಯ ಮೆನನ್ ಜಯಲಲಿತ ಅವರ ಜೀವನ ಚರಿತ್ರೆ ಕುರಿತು ದಿ ಐರನ್ ಲೇಡಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಚಿತ್ರದಲ್ಲೂ ಅವರ ಪಾತ್ರ ಕುಮಾರಿ ಅಂತನೇ ಇರುತ್ತದೆ. ಆದರೂ ಲೇಖನದಲ್ಲಿ ಯಾಕೆ ಶ್ರೀಮತಿ ಎಂದು ಹೇಳಲಾಗಿದೆ ಎಂಬುದು ಅಭಿಮಾನಿಗಳಲ್ಲಿ ಕಾಡುತ್ತಿರುವ ಬಹುದೊಡ್ಡ ಪ್ರಶೆಯಾಗಿದೆ.

ಕನ್ನಡದ ಮೈನಾ, ಕೋಟಿಗೊಬ್ಬ-೨ ತೆಲುಗಿನ ಗೀತ ಗೋವಿಂದಂ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿರುವ ನಟಿ ನಿತ್ಯಗೆ ಅಪಾರ ಅಭಿಮಾನಿ ಬಳಗವೇ ಇದೆ. ಆದರೆ ಈಗ ಅವರು ಕದ್ದು ಮುಚ್ಚಿ ಮದುವೆಯಾಗಿದ್ದಾರೆ ಎಂಬುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಅಲ್ಲದೇ ಯಾರು ಆ ಅದೃಷ್ಟವಂತ ಎಂಬ ಊಹಾಪೋಹಗಳು ಶುರುವಾಗಿದೆ.

ಈ ಮೊದಲು ದಕ್ಷಿಣ ಭಾರತದ ಶ್ರೀಯಾ, ರಾಧಿಕಾ ಆಪ್ಟೆ ಅವರು ಕದ್ದುಮಚ್ಚಿ ಮದುವೆಯಾಗಿದ್ದರು, ಕೆಲ ವರ್ಷದ ನಂತರವೇ ಅವರ ವೈವಾಹಿಕ ಜೀವನದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಅಲ್ಲದೇ ಇಲಿಯಾನ ಮದುವೆಯಾಗಿ, ವಿಚ್ಚೇದನ ಪಡೆದಿರುವುದು ಅನೇಕ ವರ್ಷದ ಬಳಿಕ ತಿಳಿಯಿತು. ಈಗ ನಿತ್ಯ ಅವರೇ ತಮ್ಮ ಮದುವೆ ಬಗ್ಗೆ ಸ್ಪಷ್ಟಪಡಿಸಬೇಕು.

Leave a Comment