ಕತ್ತು ಬಿಗಿದು ವ್ಯಕ್ತಿ ಕೊಲೆ

ಟಿ.ನರಸೀಪುರ, ಜ.6- ವ್ಯಕ್ತಿಯೊಬ್ಬನ ಕತ್ತು ಬಿಗಿದು ಕೊಲೆ ಮಾಡಿ ಬಿಸಾಡಿರುವ ಘಟನೆ ಕೊಳ್ಳೇಗಾಲ ಮುಖ್ಯ ರಸ್ತೆಯ ದಮ್ಮಯ್ಯನ ಬೋರೆ ನಾಲೆಯ ಬಳಿ ದೊರೆಕಿದೆ.
ಮೃತನನ್ನು ಕೊಳ್ಳೇಗಾಲ ತಾಲ್ಲೂಕಿನ ಆಲಹಳ್ಳಿ ಗ್ರಾಮದ ನಿಂಗೇಗೌಡ ಅವರ ಪುತ್ರ ಬಸವರಾಜು(43) ಎಂದು ಗುರುತಿಸಲಾಗಿದ್ದು, ದುಷ್ಕರ್ಮಿಗಳು ಕತ್ತಿಗೆ ಬೆಲ್ಟ್ ಹಾಗೂ ಟವಲ್‍ನಿಂದ ಬಿಗಿದು ಕೊಲೆ ಮಾಡಿ ಬಿಸಾಡಿದರೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪೊಲೀಸ್ ಠಾಣೆಯ ಸಿಪಿಐ ಎಂ. ಆರ್. ಲವ ಹಾಗೂ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave a Comment