ಕತ್ತು ಕೊಯ್ದು ಯುವತಿ ಕೊಲೆ

ಕಲಬುರಗಿ,ಡಿ.7-ಬಹಿರ್ದೆಸೆಗೆ ಹೋಗಿದ್ದ ಯುವತಿಯನ್ನು ಕತ್ತು ಕೊಯ್ದು ಕೊಲೆ ಮಾಡಿದ ಅಮಾನುಷ ಘಟನೆ ಆಳಂದ ತಾಲ್ಲೂಕಿನ ದರ್ಗಾಶಿರೂರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಗೀತಾ ತಂದೆ ಮಲ್ಲಪ್ಪ ಹಳಿಗೋಡೆ (22) ಕೊಲೆಯಾದ ಯುವತಿ.

ಗುರುವಾರ ರಾತ್ರಿ ಬಹಿರ್ದೆಸೆಗೆಂದು ಯುವತಿ ಗ್ರಾಮದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಹೋಗಿದ್ದಾಗ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೊಲೆ ಮಾಡಿದವರು ಯಾರು ಮತ್ತು ಕೊಲೆಗೆ ಕಾರಣವೇನು ಎಂಬುವುದಿನ್ನೂ ತಿಳಿದುಬಂದಿಲ್ಲ.

ಸುದ್ದಿ ತಿಳಿದು ಮಾದನಹಿಪ್ಪರಗಾ ಪೊಲೀಸ್ ಪಿಎಸ್ಐ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Comment