ಕತ್ತುಕತ್ತರಿಸಿ ವ್ಯಕ್ತಿಯ ಭೀಕರ ಹತ್ಯೆ

ಪಿರಿಯಾಪಟ್ಟಣ, ಅ. 12- ತಾಲೂಕಿನ ಬಸಲಪುರ ಗ್ರಾಮದಲ್ಲಿ ಕತ್ತುಕತ್ತರಿಸಿ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ವೆಂಕಟೇಶ್ (32) ಎಂಬಾತ ಕೊಲೆಯಾದ ವ್ಯಕ್ತಿ. ಕಳೆದ ತಡರಾತ್ರಿ ಈತನನ್ನು ಕೊಲೆ ಮಾಡಿ ಅವರ ಜಮೀನಿನಲ್ಲಿ ಶವವನ್ನು ಬಿಸಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಹತ್ಯೆಗೆ ಕಾರಣ ಏನೆಂಬುದು ಪೊಲೀಸರ ವಿಚಾರಣೆ ನಂತರವೇ ಬೆಳಕಿಗೆ ಬರಬೇಕಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment