ಕಣ್ಸನ್ನೆ ಬೆಡಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಬೆಂಗಳೂರು, ಜ ೨೫- ತನ್ನ ಕಣ್ಸನ್ನೆ ಮೂಲಕವೇ ೨೦೧೮ರಲ್ಲಿ ಗೂಗಲ್ ಹುಡುಕಾಟದಲ್ಲಿ ಸಂಚಲನ ಮೂಡಿಸಿದ ಪ್ರಿಯಾ ಪ್ರಕಾಶ್ ವಾರಿಯರ್ ಸ್ಯಾಂಡಲ್‌ವುಡ್‌ನಲ್ಲೂ ಸದ್ದು ಮಾಡಲು ಸಿದ್ದರಾಗಿದ್ದಾರೆ.

ಪ್ರಿಯಾ ನಟಿಸಿದ್ದ ಮಲಯಾಳಂ ಚಿತ್ರ ‘ಒರು ಅಡಾರ್ ಲವ್’ ಕನ್ನಡಕ್ಕೆ ‘ಕಿರಿಕ್ ಲವ್ ಸ್ಟೋರಿ’ ಹೆಸರಲ್ಲಿ ಡಬ್ ಆಗಿದ್ದು, ಫೆಬ್ರವರಿ ೧೪ ರಂದು ಬಿಡುಗಡೆಯಾಗಲಿದೆ. ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಬಹು ಖ್ಯಾತಿ ಗಳಿಸಿರುವ ಪ್ರಿಯಾ ಅವರು ಕಣ್ಸನ್ನೆ ನೋಡಲು ಅಭಿಮಾನಿಗಳು ಅಷ್ಟೆ ಕಾತುರರಾಗಿ ಕಾಯುತ್ತಿದ್ದಾರೆ.

ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು, ಹಿಂದಿಗೆ ಕೂಡಾ ಡಬ್ ಆಗಿರುವ ‘ಒರು ಅಡಾರ್ ಲವ್’ ಪ್ರೇಮಿಗಳ ದಿನದಂದು ತೆರೆಗೆ ಬರಲು ಸಜ್ಜಾಗಿದೆ. ಪ್ರಿಯಾ ಪ್ರಕಾಶ್ ವಾರಿಯರ್ ಒಂದೇ ಒಂದು ಕಣ್ಸನ್ನೆ ಹಾಗೂ ಬೆರಳನ್ನೇ ಗನ್ ಮಾಡಿಕೊಂಡು ಬುಲೆಟ್ ಹೊಡೆಯುವ ಮೂಲಕ ಸೆಲೆಬ್ರಿಟಿಯಾಗಿದ್ದಾರೆ.

‘ಒರು ಅಡಾರ್ ಲವ್’ ಸಿನಿಮಾ ಬಿಡುಗಡೆಗೂ ಮೊದಲೇ ಅವರ ಒಂದೇ ಒಂದು ಕಣ್ಸನ್ನೆಗೆ ಎಲ್ಲರೂ ಫಿದಾ ಆಗಿದ್ದರು. ಪ್ರಿಯಾ ಪ್ರಕಾಶ್ ವಾರಿಯರ್ ಹಿಂದೆಯೇ ಕನ್ನಡ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿತ್ತಾದರೂ ಅದು ಕೈಗೂಡಿರಲಿಲ್ಲ. ‘ಕಿರಿಕ್ ಲವ್ ಸ್ಟೋರಿ’ ಮೂಲಕ ಅವರು ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮುಂದೆ ಅವರು ಸ್ಯಾಂಡಲ್‌ವುಡ್‌ನಲ್ಲೂ ನಟಿಸಿ ಗಮನ ಸೆಳೆಯಲಿದ್ದಾರೆಯೇ ಕಾದು ನೋಡಬೇಕು.

Leave a Comment