ಕಣ್ಮುಚ್ಚಿ ಕುಳಿತಿರುವ ಪಾಲಿಕೆ ಅಧಿಕಾರಿಗಳು

ಮೈಸೂರು. ಸೆ.1- ನಗರದ ಹೃದಯ ಭಾಗವಾದ ವಾರ್ಡ ನಂಬರ್ ೫೦ ರ ನಾರಾಯಣ ಶಾಸ್ತ್ರಿ ರಸ್ತೆ, ಸಿದ್ದಪ್ಪ ವೃತ್ತದ ಬಳಿಯಿರುವ ತ್ರಿಲೋಕ ಬಾರ್ ಮುಂಭಾಗ ಮ್ಯಾನ್ ಹೋಲ್ ಕುಸಿದು ಹಳ್ಳ ವಾಗಿ ಸುಮಾರು ಹದಿನೈದು ದಿನ ಕಳೆದರೂ ಇದರ ಕಡೆ ಯಾವ ಜನಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಗಮನವೇಹರಿಸಿಲ್ಲ, ಈ ರಸ್ತೆಯಲ್ಲಿ ಲಕ್ಷಾಂತರ ಜನರು ಓಡಾಡುವ ಅತಿ ಹೆಚ್ಚು ಜನನಿಬಿಡ ಪ್ರದೇಶವಾಗಿದ್ದು ಶಾಲಾ ಕಾಲೇಜುಗಳು ಇರುವುದರಿಂದ ಮಕ್ಕಳ ಒಡಾಟವಿರುತ್ತದೆ. ಕಳೆದ ಹದಿನೈದು ದಿನಗಳಿಂದ ಈ ಭಾಗದ ಜನರ ಕಷ್ಟ ಹೇಳತೀರದಾಗಿದೆ, ಈ ಭಾಗದ ಜನರ ಕಷ್ಟಕ್ಕೆ ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂಧಿಸುವರೇ ಕಾಯ್ದು ನೋಡಬೇಕಾಗಿದೆ.
ಜೋಗಿ ಮಂಜು
ಸಂಚಾಲಕರು ಯುವ ಭಾರತ್ ಸಂಘಟನೆ.

Leave a Comment