ಕಣ್ಮನ ಸೆಳೆಯುವ ಮಿಥಾಲಿ……!

ನವದೆಹಲಿ, ಸೆ ೨೬- ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೋಟ್ಯಂತರ ಭಾರತೀಯರ ನಿರೀಕ್ಷೆ ಹುಸಿಯಾಯಿತಾದರೂ, ಮಿಥಾಲಿ ಪಡೆಗೆ ಟ್ವಿಟರ್ ನಲ್ಲಿ, ಫೇಸ್ ಬುಕ್ ನಲ್ಲಿ, ಸುದ್ದಿ ವಾಹಿನಿ, ಪತ್ರಿಕೆಗಳಲ್ಲಿ… ಹೀಗೆ, ದಶದಿಕ್ಕುಗಳಿಂದಲೂ ಮೆಚ್ಚುಗೆಯ ಮಹಾಪೂರ ಹರಿದುಬಂದಿತ್ತು, ಆ ಬಳಿಕ ಮಿಥಾಲಿ ಸಾಮಾಜಿಕ ಜಾಲತಾಣದಲ್ಲಿ ಹೊಚಿಕೊಂಡಿದ್ದ ಸೆಲ್ಫಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಆದರೆ ಇದೀಗ ಮತ್ತೆ ಮಿಥಾಲಿ ಸುದ್ದಿಯಲ್ಲಿದ್ದಾರೆ. ಏಕೆಂದರೆ ವೋಗ್ ನಿಯತಕಾಲಿಕೆಯ ೧೦ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಬಿಡುಗಡೆಯಾಗಿರುವ ಕವರ್ ಪೇಜ್‌ನಲ್ಲಿ ಮಿಥಾಲಿ ಅವರ ಲುಕ್ ಇತರೆ ಸೆಲಿಬ್ರಿಟಿಗಳನ್ನು ಮೀರಿಸುವಂತಿದೆ. ಹೌದು ಮಿಥಾಲಿ ಅವರನ್ನು ಬ್ಯಾಟ್ ಹಿಡಿದು ನಿಂತರೇ ಮಹಿಳಾ ಕ್ರಿಕೆಟ್ ತಂಡದ ಸಚಿನ್ ಎಂದೇ ಬಿಂಬಿಸಲಾಗುತ್ತದೆ. ಆದರೆ ಆಕರ್ಷಕ ಉಡುಗೆ ತೊಟ್ಟು ನಿಂತರೇ ಎಲ್ಲಾ ಸೆಲಿಬ್ರಿಟಿಗಳನ್ನು ಮೀರಿಸುತ್ತಾರೆ ಎಂಬುದಕ್ಕೆ ಈ ಕವರ್ ಪೇಜ್‌ನ ಲೂಕ್‌ನಿಂದ ಸಾಬೀತಾಗಿದೆ.

ಕಪ್ಪು ಬಣ್ಣದ ಜಂಪ್‌ಸ್ಯೂಟ್ ಹಾಗೂ ಬ್ಲಾನ್ ಕೇಶ ವಿನ್ಯಾಸದಲ್ಲಿ ಪೋಸ್ ಕೊಟ್ಟಿರುವ ಮಿಥಾಲಿ ಅವರು ಬಾಲಿವುಡ್‌ನ ಕಿಂಗ್‌ಖಾನ್ ಶಾರೂಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. ಕಣ್ ಮಿಟುಕಿಸದೇ ಮಿಥಾಲಿ ಅವರನ್ನು ನೋಡಬೇಕಿನಿಸುವುದು ನಿಜ.

ವೋಗ್ ತನ್ನ ಹುಟ್ಟುಹಬ್ಬದ ಅಂಗವಾಗಿ ಶಾರೂಖ್ ಖಾನ್, ಪ್ರಿಯಾಂಕ ಛೋಪ್ರಾ, ಅನುಷ್ಕಾ ಶರ್ಮಾ, ಸೋನಮ್ ಕಪೂರ್, ಟ್ವೀಕಲ್ ಖನ್ನಾ, ಕರಣ್ ಜೋಹರ್, ಪದ್ಮ ಲಕ್ಷ್ಮಿ, ಮಿಥಾಲಿ ರಾಜ್, ನೀತಾ ಅಂಬಾನಿ ಅವರನೊಳ್ಳಗೊಂಡ ಫೋಟ್ ಶೂಟ್ ನಡೆಸಿತ್ತು. ಅದರಲ್ಲಿ ಮಿಥಾಲಿ ಅವರನ್ನು ಖ್ಯಾತ ಛಾಯಾಚಿತ್ರಗಾರ ಪ್ರಿಯಾಂಕ ಕಪಾಡಿಯಾ ಎಂಬಾಕೆ ಫೋಟ್ ಕ್ಲಿಕ್ಕಿಸಿದ್ದರು. ಈ ಹಾಟ್ ಲುಕ್ ಸಖತ್ ವೈರಲ್ ಆಗಿದ್ದು ಅವರ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ಈ ಫೋಟ್ ಕಂಡ ಸೋನಮ್ ಕಪೂರ್ ಸ್ವತಃ ಅವರೇ ದಂಗಾಗಿ ಹೋಗಿದ್ದು ನಿನ್ನೆ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಈ ಹಿಂದೆ ಮಿಥಾಲಿ ರಾಜ್ ತಾವು ಸ್ನೇಹಿತರೊಡನೆ ಇದ್ದ ಸಂತಸದ ಕ್ಷಣಗಳ ಸೆಲ್ಫಿ ತೆಗೆದುಕೊಂಡಿದ್ದು ಅದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು, ಇದನ್ನು ಅವರ ಅಭಿಮಾನಿಗಳು ತಿರಸ್ಕರಿಸಿದ್ದರು. ಅದರಲ್ಲಿ ಅವರು ತೊಟ್ಟ ಉಡುಗೆ ಅನುಚಿತ ಆಗಿದೆ ಎಂದು ಆರೋಪಿಸಿದ ಅವರ ಅಭಿಮಾನಿಗಳು, ಟ್ವಿಟಿಗರು ಅವರನ್ನು ’ಪೋರ್ನ್ ಸ್ಟಾರ್’ ಎಂದು ತೆಗಳಿದ್ದರು. ಅವರನ್ನು ಮಿಥಾಲಿ ರಾಜ್ ಟ್ವಿಟರ್ ನಲ್ಲಿ ಬೆವರಿಳಿಸಿದ್ದನ್ನು ಇಲ್ಲಿ ನೆನೆಯಬಹುದು.

Leave a Comment