ಕಣ್ಣೀರು ಹಾಕಿದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್

 

ಹೊಸಪೇಟೆ: ರಾಜ್ಯದಲ್ಲಿ ಉಪ ಚುನಾವಣೆಯ ಪ್ರಚಾರದ ಅಖಾಡ ರಂಗೇರಿದ್ದು,ಹೊಸಪೇಟೆಯ ಹೊಸೂರು ಗ್ರಾಮದಲ್ಲಿ ಪ್ರಚಾರ ನಡೆಸಿದ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಕಣ್ಣೀರು ಹಾಕಿದ್ದಾರೆ.

ಮಗನ ಮದುವೆ ಕಾರ್ಯಕ್ರಮ ಭಾಗವಹಿಸದ್ದಕ್ಕೆ ಭಾವುಕರಾದ ಆನಂದ್ ಸಿಂಗ್, ಕಣ್ಣೀರು ಸುರಿಸಿದ್ದಾರೆ. ನಿನ್ನೆ ಅವರ ಮಗ ಸಿದ್ಧಾರ್ಥ ಸಿಂಗ್ ಮದಲಿಂಗ ಶಾಸ್ತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಿಲ್ಲ, ದೇವರ ಮೇಲೆ ಭಾರ ಹಾಕಿದಿನಿ, ಸಮಾಜ ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಹೇಳಿದ್ದಾರೆ.

ಇನ್ನೂ ಮತದಾರರಿಗೆ ಗೋಲ್ಡ್ ಕಾಯಿನ್ ಹಂಚುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್, ನಾನು ಯಾರ ಮೇಲೆ ಆರೋಪ, ಅಥವಾ ಟೀಕೆಯನ್ನು ಮಾಡಲ್ಲ, ಆರೋಪ ಮಾಡಿದವರು ನನಗಿಂತ ಹಿರಿಯರು, ಅವರ ಅನುಭವದಷ್ಟು ನನ್ನ ವಯಸ್ಸಿಲ್ಲ, ಅವರು ಆರೋಪ ಮಾಡಿದ್ದು ಎಷ್ಟು ಸತ್ಯ ಸುಳ್ಳು ಎಂಬುದು ನನಗೆ ಗೊತ್ತಿಲ್ಲ ಎಂದರು.
ಚುನಾವಣೆಯಲ್ಲಿ ಆರೋಗ್ಯಕರ ಪೈಪೋಟಿ ಇರಬೇಕು. ಒಬ್ಬರ ಮೇಲೆ ಒಬ್ಬರು ವೈಯಕ್ತಿಕ ವಿಚಾರ ಇಟ್ಟುಕೊಂಡು ಆರೋಪಮಾಡುವುದು ಸರಿ ಅಲ್ಲ, ತಮ್ಮ ಮಗನ ಮದುವೆ ವಿಚಾರಕ್ಕೆ ಸಂಭಂದಿಸಿದಂತೆ ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿದ್ದೇನೆ ಎಂದು ಆನಂದ್ ಸಿಂಗ್ ತಿಳಿಸಿದರು.

Leave a Comment