ಕಣ್ಣಿನ ಮಹತ್ವ ಸಾರುವ ಕವಚ

  • ಪ್ರಕಾಶ್

ಅಭಿಮಾನಿಗಳಿಗೆ ಯಾರಾದ್ರೂ ನಿಂದಿಸಿದರೆ ಅದು ಮಹಾ ತಪ್ಪು ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದ್ದ ಬೆನ್ನಲ್ಲೇ ಕಳೆದ ಭಾನುವಾರ ರಮಣ ಮಹರ್ಷಿ ಅಂಧರ ಶಾಲೆಯಲ್ಲಿ ‘ಕವಚ’ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಿವಣ್ಣ, ತಮ್ಮ ಅಭಿಮಾನಿಗಳಿಗೆ ನಮಗಿಂತ ನೀವೇ ಗ್ರೇಟ್ ಎಂದಿದ್ದಾರೆ.

kavach-dir

ಅಂಧರ ತಂಡ ವೇದಿಕೆ ಏರಿ ಜಿವಿಆರ್ ವಾಸು ನಿರ್ದೇಶನದ ‘ಕವಚ’ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಅಪ್ಪಾಜಿ ಹೇಳಿದ್ದು ಅಭಿಮಾನಿಗಳೇ ದೇವರು ಎಂದು ಅಪ್ಪಾಜಿ ರಾಜಕುಮಾರ ಆಗಿದ್ದು ನಿಮ್ಮಿಂದಲೇ ಎಂದು ಹೇಳುತ್ತಾ ‘ಹೋಗಬೇಕಾದರೆ ನಮ್ಮ ಕಣ್ಣು ಬೇರೆಯವರಿಗೆ ಕವಚ ಆಗಬೇಕು’ ಎಂದು ಚಿತ್ರದಲ್ಲಿ ಅಂಧನ ಪಾತ್ರದಲ್ಲಿ ನಟಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕರೆ ನೀಡಿದರು.

kavacha-film-4-11-2018-k-n-nageshkumar-pic-99ಜೀವನದಲ್ಲಿ ಅಂದುಕೊಂಡು ನಾನು ಏನು ಮಾಡಿಲ್ಲ, ಪಾಲಿಗೆ ಬಂದದ್ದೇ ಪಂಚಾಮೃತ ಎಂದುಕೊಂಡಿದ್ದೇನೆ. ನಾನು ಎಂದೆಂದಿಗೂ ನಿರ್ದೇಶಕರ ನಟ. ಈ ಅಂಧನ ಪಾತ್ರ ಮಾಡುವುದಕ್ಕೆ ಕಷ್ಟ ಆಯ್ತು, ಆದರೆ ಇಷ್ಟ ಪಟ್ಟು ಮಾಡಿದೆ. ಒಬ್ಬ ಅಂಧ ವ್ಯಕ್ತಿಯನ್ನು ಗಮನಿಸಿ ಈ ಪಾತ್ರ ಮಾಡಿದ್ದೇನೆ. ಚಿತ್ರದ ಡಬ್ಬಿಂಗ್‌ನಲ್ಲಿ ಕಣ್ಣು ಬಿಟ್ಟು ನನ್ನ ಪಾತ್ರ ನೋಡಿ ಅನುಭವಿಸಿ,ಆನಂದಿಸಿ ಮಾತುಗಳ ಜೋಡಣೆ ಮಾಡಿದೆ. ಇಂತಹ ಅನುಭವ ನನಗೆಂದೂ ಆಗಿರಲಿಲ್ಲ ಎಂದು ಶಿವಣ್ಣ ಬಣ್ಣಿಸಿದರು.

ಕಣ್ಣಿದ್ದರೂ ಕಣ್ಣಿಲ್ಲದಂತೆ ನಟಿಸುವುದು ಕಷ್ಟದ ಕೆಲಸ. ನಾವುಗಳು ನಮ್ಮ ಭಾವನೆಗಳನ್ನು ಸುಲಭವಾಗಿ ಹೇಳಬಹುದು. ಅವರು ಒಳಮನಸ್ಸಿನಿಂದ ಹೇಳುತ್ತಾರೆ. ದೇವರ ಮೇಲೆ ಭಾರ ಹಾಕಿ ಇಂತಹ ಪಾತ್ರದಲ್ಲಿ ನಟಿಸಿದ್ದೇನೆ. ಅಪ್ಪಾಜಿ ಕಣ್ಣುಗಳನ್ನು ದಾನ ಮಾಡಿ ಮಾದರಿಯಾಗಿದ್ದರು. ನಾನು ಸೇರಿದಂತೆ ಸಹೋದರರು ದೇಹದಾನ ಮಾಡಿದ್ದೇವೆ. ಕಲಾವಿದರಿಗೆ ಸಣ್ಣ ಪಾತ್ರವಾದರೂ ಅದರದೇ ಜವಬ್ದಾರಿ ಇದೆ.ಪಾಸಿಟೀವ್, ನೆಗಟೀವ್ ಎರಡನ್ನು ಸಮನಾಗಿ ತೆಗೆದುಕೊಂಡರೆ ಬದುಕು ಸುಂದರವಾಗಿರುತ್ತದೆ. ಆಸೆಯಿಂದ ಪಾತ್ರಕ್ಕೆ ಧ್ವನಿ ನೀಡಿದ್ದೇನೆ. ಹೋಗಬೇಕಾದರೆ ಇನ್ನೊಬ್ಬರ ಕವಚ ಆಗಲಿ ಎಂದರು ಶಿವಣ್ಣ.

ನಿರ್ದೇಶಕ ಜಿವಿಆರ್.ವಾಸು ಚಿತ್ರದ ಪ್ರಥಮ ಪ್ರತಿ ಸಿದ್ದಗೊಂಡಿದೆ. ಶಿವಣ್ಣ ಸರ್ ಹನುಮಾನ್ ಇದ್ದಂತೆ. ಎಲ್ಲಾ ಪಾತ್ರಕ್ಕೆ ಹೊಂದಿಕೊಳ್ಳುತ್ತಾರೆ. ಕಿಲ್ಲಿಂಗ್ ವೀರಪ್ಪನ್ ಸಮಯದಲ್ಲಿ ಅವರ ನಟನೆ ನೋಡಿ, ಈ ಚಿತ್ರಕ್ಕೆ ಇವರೇ ಸರಿಯಾಗಿದ್ದಾರೆಂದು

ಅಂದೇ ತೀರ್ಮಾನಿಸಲಾಗಿತ್ತು ಅದರಂತೆ ಅವರನ್ನೇ ಹಾಕಿಕೊಂಡು ಸಿನೆಮಾ ಮಾಡಿದ್ದು ಉತ್ತಮವಾಗಿ ಮೂಡಿಬಂದಿದೆ ಎಂದು ಶಿವಣ್ಣ ಅಭಿನಯವನ್ನು ಹೊಗಳಿದರು.

ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಡಾಲಿ ಧನಂಜಯ್, ಜಯನಗರ ಶಾಸಕಿ ಸೌಮ್ಯ ರೆಡ್ಡಿ ಸಹ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು  ಸೌಮ್ಯ ರೆಡ್ಡಿ ನನಗೆ ಬಹಳ ಲಕ್ಕಿ ಆಗಿದ್ದಾರೆ. ಅವರು ‘ಟಗರು’ ಸಿನಿಮಾಕ್ಕೆ ಸಹ ಬಂದು ಆಶೀರ್ವಾದ ಮಾಡಿದರು, ಈಗ ಕವಚ ಚಿತ್ರಕ್ಕೂ ಬಂದಿದ್ದಾರೆ. ಅವರು ರಾಜಕೀಯ ಜೀವನದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶಿವಣ್ಣ ಹಾರೈಸಿದರೆ, ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ನಾನು ಶಿವಣ್ಣ ಅವರ ಅಭಿಮಾನಿ.ನಮ್ಮ ತಂದೆ ಡಾ.ರಾಜಕುಮಾರ್ ಅಭಿಮಾನಿ, ಹಾಗಾಗಿ ಅವರು ನನ್ನ ಸಹೋದರನಿಗೆ ಶ್ರೀ ರಾಜಕುಮಾರ್ ಎಂದು ನಾಮಕರಣ ಮಾಡಿರುವ ವಿಚಾರ ಹೇಳಿಕೊಂಡರು.ಚಿತ್ರದ ನಾಯಕಿಯರಾದ ಕೃತಿಕಾ, ಹಾಗೂ ಇತಿ ಸಹ ಹಾಜರಿದ್ದರು.‘ಕವಚ’ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.ಚಿತ್ರದ ಟೀಸರ್ ಯು ಟ್ಯೂಬ್ ಅಲ್ಲಿ ಸದ್ದು ಮಾಡುತ್ತಿದೆ

Leave a Comment