ಕಣ್ಣಿನ ಕಾಜಲ್ ತೆಗೆಯುವ ಪರಿ

 

ಕಣ್ಣಿಗೆ ಕಾಜಲ್ ಹಚ್ಚಿದರೆ ಕಣ್ಣಿನ ಅಂದ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ಅದನ್ನು ಆಮೇಲೆ ಕ್ಲೀನ್ ಮಾಡಿಕೊಳ್ಳುವುದು ತುಂಬಾ ಕಷ್ಟ. ಅದನ್ನು ಕ್ಲೀನ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.
ಆಲಿವ್ ಆಯಿಲ್ : ನೈಸರ್ಗಿಕವಾಗಿ ಮೇಕಪ್ ತೆಗೆಯಲು ಇದು ಸಹಾಯಕಾರಿ. ಇದನ್ನು ಬೆರಳಿನ ತುದಿಯಲ್ಲಿ ತೆಗೆದುಕೊಂಡು ನಿಮ್ಮ ಕಣ್ಣಗಳ ಸುತ್ತಲಿನ ಪ್ರದೇಶವನ್ನು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಬಳಿಕ ಹತ್ತಿ ಉಂಡೆಯಿಂದ ಕಾಜಲ್ ನ್ನು ಕ್ಲೀನ್ ಮಾಡಿ.
ವ್ಯಾಸಲಿನ್ ನಿಂದ ಕೂಡ ಕಣ್ಣಿಗೆ ಹಚ್ಚಿದ ಕಾಜಲ್ ನ್ನು ತೆಗೆಯಬಹುದು. ಇದನ್ನು ಕೂಡ ಬೆರಳಿನ ತುದಿಯಲ್ಲಿ ತೆಗೆದುಕೊಂಡು ನಿಮ್ಮ ಕಣ್ಣಗಳ ಸುತ್ತಲಿನ ಪ್ರದೇಶವನ್ನು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಬಳಿಕ ಹತ್ತಿ ಉಂಡೆಯಿಂದ ಕಾಜಲ್ ನ್ನು ಕ್ಲೀನ್ ಮಾಡಿ. ಇದು ಕಾಜಲ್ ನ್ನು ಕ್ಲೀನ್ ಮಾಡುವುದರ ಜೊತೆಗೆ ಕಣ್ಣಿನ ಸುತ್ತಲಿನ ಪ್ರದೇಶವನ್ನು ತೇವಗೊಳಿಸುತ್ತದೆ.

Leave a Comment