ಕಣಿವೆಮಾರಮ್ಮ ದೇವಿಗೆ ವಿಶೇಷ ಅಲಂಕಾರ

ಚಿತ್ರದುರ್ಗ.ಸೆ.2; ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಿಗೆ ಬೆಂಗಳೂರಿನ ಕರಗ ಮಾದರಿಯಲ್ಲಿ ವಿಶೇಷವಾಗಿ ಅಲಂಕರಿಸಲಾಗಿತ್ತು.
ಮಲ್ಲಿಗೆ ಮೊಗ್ಗು ಹಾಗೂ ಹಾರಗಳಿಂದ ಕಣಿವೆಮಾರಮ್ಮನಿಗೆ ದ್ರೌಪದಿದೇವಿ ಸಿಂಗಾರ ಮಾಡಲಾಗಿತ್ತು. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯಂದು ಇಲ್ಲಿಯವರೆಗೂ ಮಾಡಿದ್ದ ಎಲ್ಲಾ ಅಲಂಕಾರಕ್ಕಿಂತಲೂ ಕರಗ ಅಲಂಕಾರ ವಿಭಿನ್ನವಾಗಿತ್ತು. ಬೆಳಗಿನಿಂದ ಸಂಜೆಯತನಕ ಅಪಾರ ಭಕ್ತರು ಆಗಮಿಸಿ ಕಣಿವೆಮಾರಮ್ಮನ ಶೃಂಗಾರವನ್ನು ಕಣ್ತುಂಬಿಕೊಂಡರು. ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಮಂಜುನಾಥ, ಕಣ್ಮೇಶ್, ಗಿರೀಶ್, ರಂಗನಾಥ ಇವರುಗಳು ಗುರುವಾರ ರಾತ್ರಿ ಹನ್ನೊಂದು ಗಂಟೆಯಿಂದ ಸತತವಾಗಿ ನಾಲ್ಕು ಗಂಟೆಗಳ ಕಾಲ ಕಣಿವೆಮಾರಮ್ಮನ ಅಲಂಕಾರದಲ್ಲಿ ತೊಡಗಿದ್ದರು.

Leave a Comment