ಕಡ್ಡಾಯವಾಗಿ ರಕ್ಷಾ ಕವಚ ಧರಿಸಿ ಕರ್ತವ್ಯ ನಿರ್ವಹಿಸಿ

ಹನೂರು : ಮಾ.27- ಪಟ್ಟಣ ಪಂಚಾಯಿತಿ ವತಿಯಿಂದ ನೀಡಿರುವ ರಕ್ಷಾ ಕವಚ ಸೇರಿದಂತೆ ಇನ್ನಿತರ ಪರಿಕರಗಳನ್ನು ಪೌರ ಕಾಮಿ೯ಕರು ಕಡ್ಡಾಯವಾಗಿ ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ ತಿಳಿಸಿದರು.
ಹನೂರು ಪಟ್ಟಣ ಪಂಚಾಯಿತಿ ಮುಂಭಾಗ ಪಟ್ಟಣದ ಪೌರ ಕಾರ್ಮಿಕರಿಗೆ ಗುರುವಾರ ಸಂಜೆ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಸೂಚನೆ ನೀಡಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಎಲ್ಲಂದರಲ್ಲಿ ಕಸ ಕಡ್ಡಿ ಹಾಗೂ ತ್ಯಾಜ್ಯ ವಸ್ತುಗಳಿಂದ ಕೂಡಿ ಅನೈರ್ಮಲ್ಯ ಶುಚಿತ್ವ ಕಾಪಾಡುವ ಕೆಲಸ ದೊಡ್ಡದು. ಪೌರ ಕಾರ್ಮಿಕ ಸಿಬ್ಬಂದಿಗಳಾದ ತಾವು ಸ್ವಚ್ಛಗೊಳಿಸಿ ಶುಚಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಿರ ಅಲ್ಲದೆ ಅನೈರ್ಮಲ್ಯದಿಂದ ರೋಗ ರೂಜಿನಗಳು ಹರಡದಂತೆ
ಪಟ್ಟಣವನ್ನು ಸ್ವಚ್ಛಗೊಳಿಸಿ ಸುಂದವಾಗಿ ಕಾಣಲು ಶ್ರಮಪಡುತ್ತಿದ್ದಿರ ಅದರಂತೆಯೇ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ತಮ್ಮ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕು ಈ ದಿಸೆಯಲ್ಲಿ ಪ.ಪಂ ವತಿಯಿಂದ ರಕ್ಷಾ ಕವಾಚ ಹಾಗೂ ಇನ್ನಿತರ ಪರಿಕರಗಳನ್ನು ಒದಗಿಸಲಾಗಿದೆ. ಹಾಗಾಗಿ ನಾವು ನೀಡಲಾಗಿರುವ ರಕ್ಷ ಕವಚಗಳನ್ನು ಕಡ್ಡಾಯವಾಗಿ ಉಪಯೋಗಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹನೂರು ಪಟ್ಟಣದ ಪೌರ ಕಾರ್ಮಿಕ ಸಿಬ್ಬಂದಿಗಳು ಇದ್ದರು.

Leave a Comment