ಕಡಿಮೆ ರಕ್ತದೊತ್ತಡ ನಿಯಂತ್ರಣ

ಕಡಿಮೆ ಣರಕ್ತದೊತ್ತಡ ಅಥವಾ ಲೋ ಬಿಪಿ ಬಹುತೇಕರನ್ನು ಕಾಡುವ ಸಮಸ್ಯೆ. ಆಧುನಿಕ ಜೀವನ ಶೈಲಿಗಳಿಂದ ಕಡಿಮೆ ರಕ್ತದೊತ್ತಡ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಎಲ್ಲರನ್ನು ಕಾಡುತ್ತಿವೆ. ಕಡಿಮೆ ರಕ್ತದೊತ್ತಡವನ್ನು ಕೆಲವು ಸರಳ ಪರಿಹಾರಗಳನ್ನು ಮಾಡುವ ಮೂಲಕ ನಿಯಂತ್ರಿಸಿಕೊಳ್ಳಬಹುದು.
ಲೋ ಬಿಪಿ ಸಮಸ್ಯೆ ಇದ್ದವರು ಒಂದು ಗ್ಲಾಸ್ ಉಪ್ಪು ನೀರನ್ನು ನಿತ್ಯ ಸೇವನೆ ಮಾಡುವುದರಿಂದ ಲೋ ಬಿಪಿ ಸಮಸ್ಯೆಯಿಂದ ಪಾರಾಗಬಹುದು. ಅರ್ಧ ಚಮಚ ಉಪ್ಪಿಗೆ ಒಂದು ಗ್ಲಾಸ್ ನೀರನ್ನು ಬೆರೆಸಿ ಕುಡಿಯಬೇಕು. ಇದರಿಂದ ಲೋ ಬಿಪಿ ದೂರವಾಗುತ್ತದೆ. ಇದರ ಜತೆಗೆ ಆಗಾಗ್ಗೆ ಕಾಫಿ, ಟೀ ಸೇವನೆಯೂ ಒಳ್ಳೆಯದು.
ಲೋ ಬಿ.ಪಿ. ಇದ್ದವರು ಮಲಗಿದ್ದಾಗ ತಕ್ಷಣವೇ ಎದ್ದು ಕೂರಬಾರದು. ಇದರಿಂದ ತಲೆಸುತ್ತು ಬರುವ ಸಾಧ್ಯತೆ ಇರುತ್ತದೆ. ಮಲಗಿದ್ದಾಗ ನಿಧಾನವಾಗಿ ಅಥವಾ ಕುಳಿತು ಎದ್ದೇಳುವಾಗ ನಿಧಾನವಾಗಿ ಎದ್ದೇಳುವ ಅಭ್ಯಾಸವನ್ನು ಮಾಡಿಕೊಳ್ಳುವುದು ಒಳ್ಳೆಯದು. ಲೋ ಬಿ.ಪಿ. ಇದ್ದವರು ಒಮ್ಮೆಲೇ ಹೆಚ್ಚು ಆಹಾರವನ್ನು ಸೇವಿಸಬಾರದು. ಆಗಾಗ್ಗೆ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸುವುದು ಒಳ್ಳೆಯದು.
ಈ ಸರಳ ಸಮಸ್ಯೆಗಳಿಂದ ಲೋ ಬಿ.ಪಿ.ಯನ್ನು ನಿಯಂತ್ರಿಸಬಹುದು.

Leave a Comment