ಕಟ್ಟಿ ಹಾಕಿದ್ದ ನಾಯಿ ತಿಂದು ಚಿರತೆ ಪರಾರಿ

ಮಂಡ್ಯ, ಸೆ.4- ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ತಿಂದು ಪರಾರಿಯಾಗಿರುವ ಘಟನೆ ಮಂಡ್ಯ ತಾಲೂಕಿನ ಉರುಮಾರಕಸಲಗೆರೆ ಗ್ರಾಮದಲ್ಲಿ ನಡೆದಿದೆ.
ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ರಾತ್ರಿ ಮನೆಯವರು ಮಲಗಿದ್ದ ವೇಳೆ ಗ್ರಾಮಕ್ಕೆ ನುಗ್ಗಿದ ಚಿರತೆ ತಿಂದು ಪರಾರಿಯಾಗಿದೆ. ಚಿರತೆ ನಾಯಿಯನ್ನು ತಿಂದಿರುವುದನ್ನು ನೋಡಿದ ಮನೆಯವರು ಆತಂಕಗೊಂಡಿದ್ದಾರೆ.
ಚಿರತೆ ಗ್ರಾಮಕ್ಕೆ ನುಗ್ಗಿರುವುದನ್ನು ತಿಳಿದ ಗ್ರಾಮಸ್ಥರು ಭಯದಲ್ಲಿದ್ದಾರೆ. ಗ್ರಾಮಸ್ಥರು ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದಾರೆ. ಚಿರತೆ ಗ್ರಾಮಕ್ಕೆ ಬಂದಿರುವುದನ್ನು ತಿಳಿದ ಗ್ರಾಮಸ್ಥರು ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾ‌ಡಿದ್ದಾರೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment