ಕಟ್ಟಡ ಕಾರ್ಮಿಕರ ಜಿಲ್ಲಾ ಸಮ್ಮೇಳನ 8 ರಂದು

ಕಲಬುರಗಿ ಸ5:ಕಟ್ಟಡ ಕಾರ್ಮಿಕರ 3ನೆಯ ಜಿಲ್ಲಾ ಸಮ್ಮೇಳನ ಸಪ್ಟೆಂಬರ್ 8 ರಂದು ಬೆಳಿಗ್ಗೆ 11.30 ಕ್ಕೆ ನಗರದ ಜಗತ್ ಪ್ರದೇಶದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ ಎಂದು  ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು        ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಜಿಲ್ಲಾ ಸಮಿತಿ (ಎಐಟಿಯುಸಿ) ಅಧ್ಯಕ್ಷ ಪ್ರಭುದೇವ ಯಳಸಂಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಿತಕಾಯುವ ಉದ್ದೇಶದಿಂದ ಸ್ಥಾಪನೆಯಾದ ಮಂಡಳಿಯ ಅಧಿಕಾರಿಶಾಹಿ ಧೋರಣೆ ವಿರೋಧಿಸಿ, ವಿವಿಧ ಬೇಡಿಕೆಗಳಿಗಾಗಿ  ಸಮೇಳನದಲ್ಲಿ ಹಕ್ಕೊತ್ತಾಯ ಮಾಡಲಾಗುವದು. ಸಮ್ಮೇಳನವನ್ನು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಡಿ.ಎ ವಿಜಯಭಾಸ್ಕರ್ ಉದ್ಘಾಟಿಸಲಿದ್ದು ರಾಜ್ಯ ಕಾರ್ಯಾಧ್ಯಕ್ಷ ಎಚ್ ಜಿ ಉಮೇಶ ಸೇರಿದಂತೆ ಅನೇಕರು ಪಾಲ್ಗೊಳ್ಳುವರು ಎಂದರು.

ಮಾನವ ಸರಪಳಿ:

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೇಸ್  (ಎಐಟಿಯುಸಿ )ಜಿಲ್ಲಾ ಸಮಿತಿವತಿಯಿಂದ ಸಪ್ಟೆಂಬರ್ 8 ರಂದು ಜಗತ್ ವೃತ್ತದಲ್ಲಿ ಬೆಳಿಗ್ಗೆ  10.30 ಕ್ಕೆ ಮಾನವ ಸರಪಳಿ ರಚಿಸಲಾಗುವದು ಎಂದು ಎಐಟಿಯುಸಿ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದಪ್ಪ ಪಾಲ್ಕಿ ತಿಳಿಸಿದರು.

ಎಐಟಿಯುಸಿ ಕೇಂದ್ರ ಕಾರ್ಯಕಾರಿ ಸಮಿತಿಯು ದೆಹಲಿಯಲ್ಲಿ ಸಭೆ ಸೇರಿ ಕಾರ್ಮಿಕರನ್ನು ಉಳಿಸಿ ದೇಶವನ್ನು ರಕ್ಷಿಸಿ: ಜನವಿರೋಧಿ ಮೋದಿ ಸಕಾರವನ್ನು ತೊಲಗಿಸಿ ಎಂಬ ಘೋಷಣೆ ನೀಡಿದೆ, ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಾನವ ಸರಪಳಿ ರಚಿಸಲಾಗುವದು.ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣ ದಿನವಾದ ಆ. 9 ರಿಂದ ಪ್ರಾರಂಭವಾಗಿ 40 ದಿನ  ಈ ಪ್ರಚಾರಾಂದೋಲನ  ನಡೆಯಲಿದೆ ಎಂದರು..

Leave a Comment