ಕಟ್ಟಡದಿಂದ ಬಿದ್ದು ಮಹಿಳೆ ಮೃತ್ಯು

ಉಡುಪಿ, ಫೆ.೧೭- ಮಹಿಳೆಯೊರ್ವರು ಆಕಸ್ಮಿಕವಾಗಿ ಕಟ್ಟಡದಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಉಡುಪಿಯ ಕಡಿಯಾಳಿ ಬಳಿ ನಿನ್ನೆ ಸಂಜೆ ನಡೆದಿದೆ. ಉದ್ಯಾವರ ಮೂಲದ ರಾಜಶ್ರೀ ಮೃತ ದುರ್ದೈವಿ.

ಇವರು ಟೇಸ್ಟಿ ಲ್ಯಾಂಡ್ ಹೋಟೆಲ್‌ನಲ್ಲಿ ೨ ದಿನಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದರು. ನಿನ್ನೆ ಬೆಳಗ್ಗೆ ಹೋಟೆಲ್ ಮಾಲಕರಿಂದ ಹಣ ತೆಗೆದುಕೊಂಡು ಹೋದವರು ಬಳಿಕ ಮದ್ಯಪಾನ ಮಾಡಿ ಹೋಟೆಲ್‌ಗೆ ಬಂದಿದ್ದರು. ಹೋಟೆಲ್‌ನಿಂದ ಹೊರಗೆ ಬಂದು ಕಾಲು ಜಾರಿ ಕಟ್ಟಡದ ಕೆಳಗೆ ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment