ಕಟ್ಟಡಕಾರ್ಮಿಕ ಕಾನೂನು ಉಳಿಸಿ ಆಂದೋಲನ

 

ಕಲಬುರಗಿ ಫೆ 12: ಕಟ್ಟಡ ಕಾರ್ಮಿಕ ಕಾನೂನು ( 1996) ಉಳಿಸಲು ಫೆ 21 ರಿಂದ ಮಾರ್ಚ 6 ರವರೆಗೆ ದೇಶವ್ಯಾಪಿ ಪ್ರಚಾರಾಂದೋಲನ ನಡೆಸಲಾಗುವದು ಎಂದು ಕರ್ನಾಟಕ ರಾಜ್ಯ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಮಹಾಂತೇಶ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಚಾರಾಂದೋಲದ ಅಂಗವಾಗಿ ಪ್ರತಿಭಟನೆ, ಬೀದಿ ಬದಿ ಸಭೆ,ಜಾಥಾಗಳ ನಡೆಸಿ ಕೇಂದ್ರ ಸರಕಾರ ಉದ್ದೇಶಿತ ಮಸೂದೆಗಳನ್ನು ತಡೆ ಹಿಡಿಯಬೇಕೆಂದು ರಾಜ್ಯದ ಎಲ್ಲ ಲೋಕಸಭೆ ಸದಸ್ಯರ  ಹಾಗೂ ಕೇಂದ್ರಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಾಗಯ್ಯಸ್ವಾಮಿ, ಯಶವಂತ ಮಾಲಿ ಪಾಟೀಲ, ದೇವೇಂದ್ರಪ್ಪ ಕಟ್ಟಿಮನಿ  ಉಪಸ್ಥಿತರಿದ್ದರು..

Leave a Comment