ಕಟಕ

ಈ ವರ್ಷಾರಂಭದಿಂದ ಜುಲೈವರೆಗೆ ನಿಮ್ಮ ಜೀವನ ಮಂದಗತಿಯಲ್ಲೇ ಮುಂದುವರೆಯುವುದು. ಅಕ್ಟೋಬರ್‌ನಿಂದ 10 ರಿಂದ 5.04.2019ವರೆಗೆ ಗುರು 5ನೆಯವನು. ಶನಿ 6ನೆಯವನಿದ್ದು, ಅದ್ಭುತ ಫಲ ಕೊಡುವರು. ತಾಂತ್ರಿಕ ಕ್ಷೇತ್ರ ಮತ್ತು ಕೈಗಾರಿಕಾ ರಂಗದಲ್ಲಿ ನಿರಂತರ ಆದಾಯ ತಾರಕಕ್ಕೇರಿಸುವುದು. ಬೃಹತ್ ಕಂಪನಿಗಳಲ್ಲಿ ಹೂಡಿಕೆಗಳು ಮುಂದುವರೆಯುವವು. ಸರ್ಕಾರಕ್ಕೆ ತೆರಿಗೆ ಪಾವತಿ ಮಾಡುವಿರಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಬದಲಾವಣೆಗಳು ಜನಪ್ರಿಯತೆಗಳಿಸುವವು. ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನಗಳು ತಾವಾಗಿಯೇ ಬರುವವು. ಗೃಹ ನಿರ್ಮಾಣವಾಗಲಿದೆ. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಗಮನ ಕೊಡಿ. ಸಾಧನೆಯಲ್ಲಿ ಮಂದಗತಿಯಲ್ಲಿರುವರು. ಮಡದಿಯ ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ರಾಜಕೀಯ ನೇತಾರರ ಸಂಪರ್ಕ ಬೆಳೆಯುವುದು. ಕಂಪನಿಯೊಂದರ ಮಾಲೀಕತ್ವವಹಿಸಿಕೊಳ್ಳುವಿರಿ. ಸಮಾಜದಲ್ಲಿ ಉನ್ನತ ಪದವಿ ಅಲಂಕರಿಸುವಿರಿ. ಆರೋಗ್ಯ ವರದಾನವಾಗಲಿದೆ. ಕೃಷಿರಂಗದಲ್ಲಿ ನೀರಾವರಿ ಉತ್ತಮ ಫಲ ಕೊಡುವುದು. ಕಬ್ಬಿಣ, ಎಣ್ಣೆ, ವೈದ್ಯಕೀಯ ವಸ್ತುಗಳ ಮಾರಾಟಗಾರರಿಗೆ ಧನಲಾಭ ಸಮೃದ್ಧಿಯಾಗುವುದು. ಸಾಹಿತಿ, ಪತ್ರಿಕೋದ್ಯಮಿ, ಕಲಾವಿದ, ಕೂಲಿ ಕಾರ್ಮಿಕರು, ಮುದ್ರಕರು, ಪ್ರಕಾಶಕರು, ಕಂಪನಿ ವ್ಯವಹಾರಿಗಳು, ಗೌರವಯುತ ಜೀವನ ನಡೆಸುವರು. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವುದು. ರಾಜಕೀಯ ರಂಗದವರು ಚುನಾವಣೆ ಲಾಭ ಪಡೆಯುವರು. ಮಹಿಳಯರಿಗೆ ಉದ್ಯೋಗದಲ್ಲಿ ಬಡ್ತಿಯೊಂದಿಗೆ ಸ್ಥಾನ ಬದಲಿಯಾಗಲಿದೆ. ವಾಹನ ವ್ಯವಹಾರಿಗಳು ಸಾರಿಗೆ ಅಭಿವೃದ್ಧಿಪಡಿಸುವರು.

ಆದಾಯ-14, ವ್ಯಯ-8

ಶುಭದಿನಗಳು: 19, 21, 22, 24.