ಕಗ್ಗಂಟಾಗಿ ಉಳಿದ ಬೆಳಗಾವಿ ಪಾರ್ಕಿಂಗ್ ಸಮಸ್ಯೆ

ಬೆಳಗಾವಿ,ಅ10: ಬೆಳಗಾವಿ ಮಹಾನಗರದಲ್ಲಿ ಬೆಸ್ಮೆಂಟ್ ತರವು ಪಾರ್ಕಿಂಗ್, ಆಟೋಮೀಟರ್ ಕಡ್ಡಾಯಗೊಳಿಸುವುದು ಸೇರಿದಂತೆ ಅನೇಕ ಮಹತ್ವದ ನಿರ್ಧಾರಗಳು ಕಗ್ಗಂಟಾಗಿ ಪರಿಣಮಿಸಿವೆ.
ಈ ಹಿಂದೆ ಪಾಲಿಕೆ ಆಯುಕ್ತ ರವಿಕುಮಾರ ಬೆಸಮೆಂಟ್ ತೆರವಿಗೊಳಿಸುವ ಕಾರ್ಯಚರಣೆ ಪ್ರಾರಂಭಿಸಿದ್ದರು. ಅದಕ್ಕೆ ಸ್ಥಳೀಯ ರಾಜಕಾರಣಿಗಳು ಅಡ್ಡಿ ಪಡಿಸಿದ ಕಾರಣ ಈ ಕಾರ್ಯಚರಣೆ ಆರಂಭದಲ್ಲಿಯೇ ಹಳ್ಳ ಹಿಡಿದಿತ್ತು.
ಮಹಾನಗರದಲ್ಲಿ ಗಣಪತಿ ಗಲ್ಲಿ, ಖಡೇಬಜಾರ್, ಮಾರುತಿಗಲ್ಲಿ, ರವಿವಾರಪೇಟೆ ಸೇರಿದಂತೆ ನಗರದ ಜನದಟ್ಟನೆಯ ಪ್ರದೇಶದಲ್ಲಿ ವಾಹನದ ಪಾಕಿರ್ಂಗ್ ಗೆ ಸ್ಥಳಾವಕಾಶವೆ ಇಲ್ಲದಿರುವುದರಿಂದ ವಾಹನ ಸವಾರರು ರಸ್ತೆಯ ಎರಡು ಬದಿಗೆ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಪೊಲೀಸ್ ಇಲಾಖೆಗೆ ದಂಡ ಕಟ್ಟುವ ಪರಿಸ್ಥಿತಿ ಎದುರಾಗಿದೆ.
ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ ಸೇರಿಕೊಂಡಿದೆ. ನಗರ ಸಂಚಾರ ಡಿಸಿಪಿ ಹಾಗೂ ಪಾಲಿಕೆ ಆಯುಕ್ತರು ಬೇಸಮೆಂಟ್ ತೆರವು ಕಾರ್ಯಾಚರಣೆಯ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ.ನಗರ ಪೊಲೀಸ್ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪಾರ್ಕಿಂಗ್ ಸಮಸ್ಯೆಗೆ ಇತಿಶ್ರೀ ಹಾಡುವುದು ಅತ್ಯಗತ್ಯವಾಗಿದೆ.
ಉದ್ಘಾಟನೆಗೊಳ್ಳದ ಪಾರ್ಕಿಂಗ್ ಸ್ಥಳ
ಬೆಳಗಾವಿನಗರದ ಖಡೇಬಜಾರ್ ಗೆ ಹೊಂದಿಕೊಂಡಿರುವ ಖಂಜರಗಲ್ಲಿಯಲ್ಲಿ ಪಾಲಿಕೆ ಲಕ್ಷಾಂತರ ರೂ ವೆಚ್ಚ ಮಾಡಿ ಪಾರ್ಕಿಂಗ  ಗಾಗಿಜಾಗೆಯನ್ನು ಅಭಿವೃದ್ಧಿ ಪಡಿಸಿದೆ. ಈ ಸ್ಥಳ ಅಭಿವೃದ್ಧಿ ಗೊಂಡು ಐದು ವರ್ಷವಾದರೂ ಉದ್ಘಾಟನೆ ಯಾಗಿಲ್ಲ. ಈ ಪಾರ್ಕಿಂಗ್ ಸ್ಥಳ ಆರಂಭವಾದರೆ ಖಡೇಬಜಾರ್,ಗಣಪತಿಗಲ್ಲಿ, ಕಚೇರಿ ಬೀದಿಯಲ್ಲಿ ವಾಹನ ಪಾರ್ಕಿಂಗ್  ನಿಷೇಧಿಸಿ ಖಂಜರಗಲ್ಲಿಯಲ್ಲಿ ವಾಹನಗಳನ್ನು ಪಾರ್ಕಿಂಗ್  ಮಾಡಬಹುದಾಗಿದೆ. ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಖಂಜರಗಲ್ಲಿಯ ಪಾರ್ಕಿಂಗ್ ಸ್ಥಳ ಬಿಕೋ ಎನ್ನುತ್ತಿದೆ.
ಮಲ್ಟಿಲೇವಲ್ ಪಾರ್ಕಿಂಗ್ ಎಂದು?
ಬೆಳಗಾವಿ ಮಹಾನಗರ ಪಾಲಿಕೆ ನಗರದ ವಿವಿಧ ಪ್ರದೇಶಗಳಲ್ಲಿ ಮಲ್ಟಿಲೇವಲ್ ಪಾರ್ಕಿಂಗ್ ವ್ಯವಸ್ಥೆ ಮಾಡಲು ನಿರ್ಧಾರ ಕೈಗೊಂಡಿತ್ತು. ಆದರೆ ಬಾಪು ಗಲ್ಲಿ ಯಲ್ಲಿ ಮಾತ್ರ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವಿವಿಧ ಕಡೆ ಮಲ್ಟಿಲೇವಲ್ ಪಾರ್ಕಿಂಗ್  ವ್ಯವಸ್ಥೆ ಯಾಗಬೇಕು ಎನ್ನುವುದು ಜನತೆಯ ಒತ್ತಾಯವಾಗಿದೆ.

Leave a Comment