ಕಂಪ್ಲಿ ಮೊಹರಂ ಆಚರಣೆ ವಿದ್ಯುತ್ ಸ್ಪರ್ಶ ವ್ಯಕ್ತಿ ಸಾವು

ಕಂಪ್ಲಿ:ಸೆ.10: ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಕಂಪ್ಲಿ-ಕೋಟೆಯಲ್ಲಿ ಕಳೆದ ರಾತ್ರಿ ನಡೆದಿದೆ.

ಇಲ್ಲಿನ 18ನೇ ವಾರ್ಡಿನ ಮುಲ್ಲಾರ್ ಓಣಿಯ ಉಪ್ಪಾರ್ ಮೋಹನ್ ಕುಮಾರ್(23) ಮೃತಪಟ್ಟ ದುರ್ಧೈವಿ. ಕಂಪ್ಲಿ-ಕೋಟೆ ಪ್ರದೇಶದ ಮಸೀದಿ ಬಳಿಯಲ್ಲಿ ಮೊಹರಂ ಕತ್ತಲ ರಾತ್ರಿಯಲ್ಲಿ ಕುಣಿಯುತ್ತಿರುವ ಸಂದರ್ಭದಲ್ಲಿ ಕೈಗಳನ್ನು ಮೇಲಕ್ಕೆತ್ತಿದ ಪರಿಣಾಮ ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿದೆ. ಯುವಕನ ಪ್ರಾಣ ಉಳಿಸಲು ಅಲ್ಲಿನ ಯುವಕರು ಪ್ರಯತ್ನಿಸಿದರೂ ಅಷ್ಟರೊಳಗೆ ಪ್ರಾಣ ಪಕ್ಷಿ ಹಾರಿಹೋಗಿದೆ ಎನ್ನಲಾಗುತ್ತಿದೆ. ಕುಟುಂಬದ ಜವಾಬ್ದಾರಿ ನಿಭಾಯಿಸುತ್ತಿದ್ದ ಯುವಕ ಮೃತಪಟ್ಟಿದ್ದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶವ ಸರ್ಕಾರಿ ಆಸ್ಪತ್ರೆಯಲ್ಲಿದ್ದು, ಶಾಸಕ ಜೆ.ಎನ್.ಗಣೇಶ ಅವರು ದಿಢೀರ್ ಭೇಟಿ ನೀಡಿ, ಮೃತನ ಪೋಷಕರಿಗೆ ಸಾಂತ್ವನ ಹೇಳಿದರು. ನಂತರ ಶವ ಸಂಸ್ಕಾರಕ್ಕಾಗಿ 5 ಸಾವಿರ ಸಹಾಯಧನ ನೀಡುವ ಜತೆಗೆ ಪರಿಹಾರದ ಭರಸವೆ ನೀಡಿದರು. ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment