ಕಂದಹಾರ್ ನಲ್ಲಿ ಅಫ್ಘನ್ ಸೇನಾ ಕಾರ್ಯಾಚರಣೆ : ಐವರು ಉಗ್ರರ ಸಾವು

ಕಾಬೂಲ್, ಫೆ 16- ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಅಫಘಾನ್ ಸೇನಾ ಕಾರ್ಯಾಚರಣೆಯಲ್ಲಿ ಐವರು ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ ಮತ್ತು 25 ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಫ್ಘನ್ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

“ಕಂದಹಾರ್ ನಲ್ಲಿ ಉನ್ನತ ಮಟ್ಟದ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುರಕ್ಷತಾ ಕ್ರಮವಾಗಿ ಈ ದಾಳಿಯನ್ನು ಖಕ್ರೆಜ್ ಜಿಲ್ಲೆಯಲ್ಲಿ ಶನಿವಾರ ನಡೆಸಲಾಯಿತು” ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಸೈನ್ಯದ ಎಂಜಿನಿಯರಿಂಗ್ ತಂಡಗಳು ಜಿಲ್ಲೆಯಾದ್ಯಂತ ಕಂದಹಾರ್‌ನ ಉತ್ತರ ಭಾಗದಲ್ಲಿ 25 ಸುತ್ತಿನ ಐಇಡಿಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಲಿಬಾನ್ ಉಗ್ರರು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ರಸ್ತೆಬದಿಯ ಬಾಂಬುಗಳು, ನೆಲ ಬಾಂಬ್ ಮತ್ತು ಆತ್ಮಹತ್ಯಾ ದಾಳಿ ನಡೆಸಲು ಐಇಡಿಗಳನ್ನು ಬಳಸುತ್ತಿದ್ದಾರೆ. ಆದರೆ ಈ ದಾಳಿ ನಾಗರಿಕರ ಸಾವು ನೋವು ಉಂಟುಮಾಡಿದೆ.

ಭದ್ರತಾ ಪಡೆಗಳು ಪ್ರಾಂತ್ಯದಾದ್ಯಂತ ಸುತ್ತುವರಿದು ಶೋಧ ಕಾರ್ಯಾಚರಣೆಗಳನ್ನು ನಡೆಸಿದ ನಂತರ ಕಳೆದ ತಿಂಗಳಿನಿಂದ ತಾಲಿಬಾನ್‌ನ ಭದ್ರಕೋಟೆಯಾದ ಕಂದಹಾರ್‌ನಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸುತ್ತಿದೆ.

ತಾಲಿಬಾನ್ ದಂಗೆಕೋರರ ಗುಂಪು 18 ವರ್ಷಗಳಿಗಿಂತ ಹೆಚ್ಚು ಕಾಲ ಬಂಡಾಯ ಸಾರಿದೆ.

Leave a Comment