ಕಂಚಿಗೆ ತೃಪ್ತಿಪಟ್ಟ ಗಾಯಾಳು ವಿಕಾಸ್

ಜಕಾರ್ತ, ಆ ೩೧- ಏಷ್ಯನ್ ಕ್ರೀಡಾಕೂಟದಲ್ಲಿ ಇಂದು ನಡೆಯಬೇಕಿದ್ದ ೭೫ ಕಿಜಿ ವಿಭಾಗದ ಬಾಕ್ಸಿಂಗ್ ಸೆಮಿಫೈನಲ್ ಪಂದ್ಯದಿಂದ ಗಾಯಾಳು ವಿಕಾಸ್ ಕೃಷ್ಣ ದೂರ ಉಳಿದಿದ್ದಾರೆ. ಇದ್ದರಿಂದಾಗಿ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಗಾಯಾಳಾದ ಬಾಕ್ಸರ್ ವಿಕಾಸ್ ಕೃಷ್ಣ ಅವರು ಇಂದು ನಡೆಯಬೇಕಿದ್ದ ಸೆಮಿಫೈನಲ್‌ನಲ್ಲಿ ಕಾದಾಟಕ್ಕೀಳಿದಯೇ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಕಳೆದ ಬುಧವಾರ ನಡೆದ ಪುರುಷರ ೭೫ ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಬೌಟ್‌ನಲ್ಲಿ ವಿಕಾಸ್ ಕೃಷ್ಣ ಅವರು ಚೀನಾದ ತಂಗ್ಲಾಥಾನ್ ತೊಹೆಟಾ ಅವರನ್ನು ೩-೨ರಿಂದ ಮಣಿಸಿದಲ್ಲದೇ, ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪರ ಚೊಚ್ಚಲ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದರು.

ಕ್ವಾರ್ಟರ್ ಫೈನಲ್‌ನಲ್ಲಿ ೨೬ ವರ್ಷದ ವಿಕಾಸ್ ಕೃಷ್ಣ ಅವರ ಕಣ್ಣುಗುಡ್ಡೆಗೆ ಪೆಟ್ಟಾಗಿತ್ತು. ಇಂದು ವೈದ್ಯರ ನೀಡಿದ ವೈದ್ಯಕೀಯ ವರದಿ ನಂತರ ವಿಕಾಸ್ ಅವರು ಮುಂದಿನ ಸೆಮಿಸ್‌ನಲ್ಲಿ ಆಡುವುದಕ್ಕೆ ಅನರ್ಹ ಎಂದು ಘೋಷಣೆ ಮಾಡಿದ ನಂತರ ಕಂಚಿನ ಪದಕ ಅವರ ಪಾಲಾಯಿತು. ವಿಕಾಸ್ ಆರೋಗ್ಯವಾಗಿದ್ದಿದ್ದರೇ ನಾಲ್ಕರ ಘಟ್ಟದ ಬೌಟ್‌ನಲ್ಲಿ ಅವರು ಕಜಕಸ್ತಾನದ ಅಮನ್‌ಕುಲ್ ಅಬಿಲ್‌ಖಾನ್ ಎದುರು ಸೆಣಸುತ್ತಿದ್ದರು. ೨೦೧೦ರ ಏಷ್ಯನ್ ಕ್ರೀಡಾಕೂಟ ದಲ್ಲಿ ಚಿನ್ನ ಗೆದ್ದಿದ್ದ ವಿಕಾಸ್ ಕಳೆದ ಬಾರಿ ಇಂಚೇನ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇಲ್ಲಿಯವರೆಗೆ ಭಾರತದ ಯಾವುದೇ ಬಾಕ್ಸರ್ ಸತತ ಮೂರು ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲಲಿಲ್ಲ.

Leave a Comment