ಕಂಗನಾ ಜೊತೆ ನಟಿಸುವುದು ಅದ್ಭುತ ಅನುಭವ : ರಾಜ್ ಕುಮಾರ್

ಮುಂಬೈ, ಜುಲೈ 24 – ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರೊಂದಿಗೆ ನಟಿಸುವುದು ಅದ್ಭುತ ಅನುಭವ ಎಂದು ನಟ ರಾಜ್ ಕುಮಾರ್ ರಾವ್ ಹೇಳಿದ್ದಾರೆ.

ರಾಜ್ ಕುಮಾರ್ ಹಾಗೂ ಕಂಗನಾ ಅಭಿನಯದ ‘ಜಡ್ಜ್ ಮೆಂಟಲ್ ಹೈ ಕ್ಯಾ’ ಚಿತ್ರ ಜುಲೈ 26ರಂದು ಬಿಡುಗಡೆಗೊಳ್ಳಲಿದೆ.

ಕಂಗನಾ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ ಕುಮಾರ್, ”ಕಂಗನಾ ಅವರೊಂದಿಗೆ ನಟಿಸುವುದು ಅದ್ಭುತ ಅನುಭವ. ಅವರು ತುಂಬಾ ಪ್ರತಿಭಾವಂತರು. ಮೊದಲಿಗಿಂತ ಕಂಗನಾ ಈಗ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದಾರೆ. ನಾವಿಬ್ಬರೂ ‘ಕ್ವೀನ್’, ‘ತನು ವೆಡ್ಸ್ ಮನು’ ಚಿತ್ರಗಳಲ್ಲಿ ನಟಿಸಿದ್ದೇನೆ. ‘ಕ್ವೀನ್’ ಚಿತ್ರದಲ್ಲಿದ್ದ ಅವರೊಂದಿಗಿನ ಸಂಬಂಧ ಈಗಲೂ ಹಾಗೇ ಇದೆ. ನಾವಿಬ್ಬರೂ ಉತ್ತಮ ಸ್ನೇಹಿತರು” ಎಂದಿದ್ದಾರೆ.

Leave a Comment