ಔಷಧಿ ಕಂಪನಿ : ಕಾರ್ಮಿಕರ ಕಾನೂನು ಜಾರಿಗೆ ಮನವಿ

ರಾಯಚೂರು.ನ.19- ಕೇಂದ್ರ ಸರ್ಕಾರವಯ ಔಷಧಿ ಕಂಪನಿಗಳ ಕಾರ್ಮಿಕರ ಕಾನೂನುಗಳನ್ನು ಜಾರಿಗೊಳಿಸಬೇಕು ಸೇರಿದಂತೆ ಮೈಸೂರಿನಲ್ಲಿ ನಡೆಯುವ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟಗಾರರ ಪ್ರತಿನಿಧಿಗಳ ಸಂಘದ ಸಭೆಯ ಪ್ರಚಾರಾರ್ಥವಾಗಿ ಔಷಧಿ ಮಾರಾಟಗಾರರು ಜಾಗೃತಿ ಜಾಥಾ ಇಂದು ನಡೆಯಿತು.
ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿರುವ ಸಂಜೀವಿನಿ ಆಸ್ಪತ್ರೆಯಿಂದ ಸಭೆಯ ಪ್ರಚಾರಾರ್ಥ ಜಾಗೃತಿ ಜಾಥಾಗೆ ಚಾಲನೆ ನೀಡಲಾಯಿತು. ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟಗಾರರ ಪ್ರತಿನಿಧಿಗಳ ಸಂಘದ ಮೊದಲ ಸಭೆಯು ಮೈಸೂರಿನಲ್ಲಿ ಡಿಸೆಂಬರ್ 2 ರಿಂದ ನಡೆಯಲಿದ್ದು, ಇದರ ಪ್ರಚಾರಾರ್ಥವಾಗಿ ಸಂಘದ ಪ್ರತಿನಿಧಿಗಳಿಂದ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಜಾಥಾ ನಡಯಲಿದೆ.
ಔಷಧ ಮತ್ತು ಮಾರಾಟಗಾರರ ಪ್ರತಿನಿಧಿಗಳ ಹಿತ್ತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದ್ದು, ಸಭೆಯಲ್ಲಿ ಕೇಂದ್ರ ಸರ್ಕಾರವು ಔಷಧಿ ಕಂಪನಿಗಳ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಬೇಕು, ಮಾರಾಟಕ್ಕೆ ಉತ್ತೇಜನ ನೀಡಬೇಕು, ಔಷಧ ಮಾರಟಗಾರರ ಕೆಲಸದ ಸಮಯ ನಿಗಧಿ ಪಡಿಸಬೇಕು, ಕಾರ್ಯನಿರ್ವಹಿಸುವ ಪ್ರತಿನಿಧಿಗಳಿಗೆ ಆಘಾತ ವಿಮೆ ನೀಡಬೇಕು, ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ತರ್ಕಬದ್ಧ ನೀತಿ ಜಾರಿಗೊಳಿಸಬೇಕು ಸೇರಿದಂತೆ ಇತರ ನಿರ್ಣಯಗಳು ಕೈಗೊಳ್ಳಲಾಗುತ್ತದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ವಸುಂಧರಾ, ಎಲ್.ಎಂ ಪೇಶ್ವಾ, ಗುರುರಾಜ ದೇಸಾಯಿ, ಶರಣಗೌಡ, ರಾಶೇಖರ್ ಪಾಟೀಲ್, ಸಿ.ರಾಜಶೇಖರ, ಡಿ.ಎಸ್ ಶರಣ ಬಸವ, ತಿಮ್ಮಪ್ಪ, ಮಾರೆಪ್ಪ, ಗಣೇಶ, ಮನೋಹರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Comment