ಔರಾದ ಬಸ ನಿಲ್ದಾಣದ ಎದುರು ಖಾಸಗಿ ವಾಹನಗಳ ದರ್ಬಾರ್

ಔರಾದ: ಪಟ್ಟಣದ ಹೃದಯ ಭಾಗದಲ್ಲಿ ಇರುವ ಕೇಂದ್ರ ಬಸ ನಿಲ್ದಾಣದ ಮುಂಭಾಗ ಸದಾಕಾಲ ದಟ್ಟಣೆಯ ವಾತಾವರಣ ಅವರಿಸಿದ್ದು. ನಿತ್ಯ ಸಾವಿರಾರು ಜನರು ತಿರುಗಾಡುವ ಸ್ಥಳದಲ್ಲಿ ಈಗ ಜೀವ ಭಯದ ವಾತಾವರಣ ನಿರ್ಮಾಣವಾಗಿದೆ.

ಹೌದು ಪಟ್ಟಣದ ಬಸ್ ನಿಲ್ದಾಣದ ಎದುರು ಖಾಸಗಿ ವಾಹನಗಳ ಹಾವಳಿ ಹೆಚ್ಚಾಗಿದ್ದು ಇದರಿಂದಾಗಿ ಬಸ ನಿಲ್ದಾಣದ ಎದುರು ದಟ್ಟಣೆ ಉಂಟಾಗಿ ಅಪಘಾತಗಳಾಗುತ್ತಿವೆ.

ವಿದ್ಯಾರ್ಥಿಗಳ ಪರದಾಟ:

ದಿನ ನಿತ್ಯ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ ನಿಲ್ದಾಣದಿಂದ ಶಾಲಾ ಕಾಲೇಜುಗಳಿಗೆ ಹೋಗುವಾಗ ಹಾಗೂ ಬರುವಾಗ ಬಸ ನಿಲ್ದಾಣದ ಎದುರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಟಾಪ್ ಸರ್ವಿಸ್:

ಬಸ ನಿಲ್ದಾಣದ ಮುಂದೆ ಖಾಸಗಿ ವಾಹನಗಳ ಮಾಲೀಕರು, ಚಾಲಕರು ಪ್ರಯಾಣಿಕರನ್ನು ತುಂಬಿಸಿಕೊಳ್ಳಲು ಇಲ್ಲಿನ ಬಸ್ ನಿಲ್ದಾಣವನ್ನು ಆವರಿಸಿಕೊಳ್ಳಲು ಕಾರಣವಾಗಿದೆ. ಟಾಪ್ ಸರ್ವಿಸ್ ನಿರಾತಂಕವಾಗಿದ್ದು, ಜನ ಅಪಾಯದೊಂದಿಗೆ ನಿತ್ಯ ಪ್ರಯಾಣಿಸುತ್ತಾರೆ. ನಿಲ್ದಾಣದೊಳಗೆ ಪ್ರವೇಶಿಸಲು ಅವಕಾಶವಿಲ್ಲಂದಂತೆ ಅಡ್ಡಾ ದಿಡ್ಡಿ ನಿಂತ ಖಾಸಗಿ ವಾಹನಗಳು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿವೆ.

ಸಂಚಾರ ದಟ್ಟಣೆ: ರಸ್ತೆಯಲ್ಲಿಯೇ ಖಾಸಗಿ ಬಸ್‌ಗಳನ್ನು ನಿಲುಗಡೆ ಜಾಸ್ತಿ ಇರುವುದರಿಂದ ಮಾರ್ಕೆಟ್ ತಲೆ ಎತ್ತಿದೆ. ಚಿಕ್ಕಪುಟ್ಟ ಅಂಗಡಿ ವ್ಯಾಪರಸ್ಥರು ಬಿಡಾರ ಹೂಡಿದ್ದಾರೆ. ಹಣ್ಣು, ಹೂವು ಸೇರಿ ಇತರ ವ್ಯಾಪಾರ ನಡೆಯುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಸುಗಮ ಸಂಚಾರಕ್ಕೆ ಕುತ್ತು ಒದಗಿ ಬಂದಿದೆ. ಟ್ರಾಫಿಕ್ ಜಾಮ್‌ಗೆ ಆಸ್ಪದ ನೀಡುತ್ತಿರುವ ಖಾಸಗಿ ವಾಹನಗಳ ದರ್ಬಾರ್‌ಗೆ ಸಂಬಂಧಿಸಿದ ಅಧಿಕಾರಿಗಳು ಕಡಿವಾಣ ಹಾಕಬೇಕು ಎನ್ನುವುದು ಸ್ಥಳೀಯರ ಒತ್ತಾಯ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಬಗೆಹರಿಸಬೇಕಾಗಿದೆ.

Leave a Comment