ಓರ್ವ ಬಾಲ ಕಾರ್ಮಿಕ ರಕ್ಷಣೆ

ರಾಯಚೂರು.ಫೆ.28- ನಗರದ ರಿಮ್ಸ್ ಆಸ್ಪತ್ರೆಯ ಹತ್ತಿರವಿರುವ ಈಟ್ಸ್ ಆಂಡ್ ಟ್ರಿಟ್ಸ್ ಬೇಕರಿಯಲ್ಲಿ 12 ವರ್ಷದ ಬಾಲಕನನ್ನು ಜಿಲ್ಲಾ ಕಾರ್ಮಿಕ ಯೋಜನೆ ಅಧಿಕಾರಿಗಳು ರಕ್ಷಿಸಿ ಸಮೀರ್ ಪಾಷ ತಂದೆ ಅಮೀರ್ ಎನ್ನುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಚಾಟ್ ಫುಡ್ (ಪಾನಿಪುರಿ) ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ ಮೇಣ ಮಗುವನ್ನು ರಕ್ಷಿಸಿ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ. ಈ ದಾಳಿ ತಂಡದಲ್ಲಿ ಮಂಜುನಾಥ ಯೋಜನಾಧಿಕಾರಿ, ವೆಂಕಟ ಸ್ವಾಮಿ, ಸುದರ್ಶನ, ರವಿಕುಮಾರ, ತಿಕ್ಕಯ್ಯ ಸೇರಿದಂತೆ ಇನ್ನಿತರರು ಇದ್ದರು. ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ತಿದ್ದುಪಡಿಯಂತೆ ಕಾಯ್ದೆನ್ವಯ 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಯಲ್ಲಿ ಬಳಸಿಕೊಳ್ಳುವುದು ನಿಷೇಧಿಸಲಾಗಿದ್ದು ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 50 ಸಾವಿರ ರೂ. ದಂಡ ಮತ್ತು 2 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ.

Leave a Comment