ಒಳ್ಳೆಯ ದಿನ ಬರಲಿದೆ ರಾಹುಲ್ ವಿಶ್ವಾಸ

ನವದೆಹಲಿ, ಜ. ೧೧- ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಏನನ್ನು ಸಾಧಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶ್ನಿಸಿರುವುದಕ್ಕೆ ಉತ್ತರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಕೊಡುಗೆ ದೇಶಕ್ಕೆ ಗೊತ್ತಿದೆ.
`ಬಿಜೆಪಿ ಮತ್ತು ಪ್ರಧಾನಿಯವರಿಗೆ ಕಾಂಗ್ರೆಸ್ 70 ವರ್ಷಗಳಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುವುದು ಅಭ್ಯಾಸವಾಗಿ ಹೋಗಿದೆ’.
70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ. ಮಾಡಿಲ್ಲ ಎಂಬುದು ದೇಶದ ಜನತೆಗೆ ಗೊತ್ತಿದೆ. ನಮ್ಮ ನಾಯಕರು ಈ ದೇಶಕ್ಕಾಗಿ ಹರಿಸಿದ ಕಣ್ಣೀರು ಮತ್ತು ರಕ್ತ ಜನರಿಗೆ ಅರ್ಥವಾಗಿದೆ ಎಂದು ಅವರು ಹೇಳಿದರು.
2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅಚ್ಛೇದಿನ್ ಮರುಕಳಿಸಲಿದೆ ಎಂದವರು ಮುಂದುವರೆದು ಹೇಳಿದರು.
ಆರ್‌ಬಿಐನಂತಹ ಸಂಸ್ಥೆಗಳನ್ನು ಬಿಜೆಪಿ, ಆರ್‌ಎಸ್‌ಎಸ್ ಮತ್ತು ನರೇಂದ್ರ ಮೋದಿ ದುರ್ಬಲಗೊಳಿಸಿದ್ದಾರೆ ಎಂದವರು ದೆಹಲಿಯಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

Leave a Comment