ಒಳಗೊಂದು-ಹೊರಗೊಂದು ಮಾತನಾಡುವುದು ದೇವೇಗೌಡರ ನೀತಿ : ವಿ ಶ್ರೀನಿವಾಸ್ ಪ್ರಸಾದ್

ಚಾಮರಾಜನಗರ,ಆ 24 – ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಅವರು ದ್ವೇಷದ ರಾಜಕಾರಣಿ, ಅಷ್ಟು ಹಿರಿಯರಾದರೂ ಒಳಗೊಂದು, ಹೊರಗೊಂಡು ಮಾತನಾಡುತ್ತಾರೆ, ಅವರೆಂದೂ ಮನಸ್ಸು ಬಿಚ್ಚಿ ಮಾತನಾಡೋದಿಲ್ಲ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಎಚ್ ಡಿ ರೇವಣ್ಣನ ಸರ್ವಾಧಿಕಾರಿ ಧೋರಣೆ ಈಗ ಬಯಲಿಗೆ ಬಂದಿದೆ, ಸರ್ಕಾರ ಪತನವಾದ ಮೇಲೆ ಒಬ್ಬರಿಗೊಬ್ಬರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಮಾನಸಿಕವಾಗಿ ಪರಸ್ಪರ ಒಂದಾಗದಿರುವುದಕ್ಕೆ ಮೈತ್ರಿ ಸರ್ಕಾರ ಪತನವಾಗಲು ಕಾರಣ ಎಂದು ಅವರು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಕೆಸರೆರೆಚಾಟ ಹೊಸದೇನಲ್ಲ. ಕಳೆದ ವಿಧಾನ ಸಭಾ ಚುನಾವಣೆ ವೇಳೆಯಲ್ಲಿಯೂ ಇಬ್ಬರೂ ನಾಯಕರು ಬೇರೆ ಬೇರೆ ಪಕ್ಷದಲ್ಲಿದ್ದು, ಪರಸ್ಪರ ವಾಗ್ದಾಳಿ ನಡೆಸುತ್ತಿದ್ದರು. ಆದರೆ, ಲೋಕಸಭಾ ಚುನಾವಣಾಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ ಒಂದಾಗಿಯೇ ನೆಲಕಚ್ಚಿದರು, 28 ಕ್ಷೇತ್ರದಲ್ಲಿ ಗೆದ್ದಿದ್ದೇ ಎರಡು ಸ್ಥಾನಗಳು…
ಕಾಂಗ್ರೆಸ್ ಒಂದು, ಜೆಡಿಎಸ್ ಒಂದು ಅವರು ಲೇವಡಿ ಮಾಡಿದರು.
ದೇವೆಗೌಡ,ಕುಮಾರಸ್ವಾಮಿ,ರೇವಣ್ಣನಿಗೆ ಈಗ ಅರಿವಾಗಿದೆಯಾ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂಬುದು ಎಂದು ಅವರು ವ್ಯಂಗ್ಯವಾಡಿದರು.

Leave a Comment