ಒಬ್ಬ ಮಹಿಳೆಗೆಗಾಗಿ ಇಬ್ಬರ ಬಡಿದಾಟ

ಬೆಂಗಳೂರು,ಆ.೫- ಇವಳು ನನ್ನವಳು, ನನ್ನವಳು ಎಂದು ಮಹಿಳೆಯೊಬ್ಬಳಿಗಾಗಿ ಪುರುಷರಿಬ್ಬರು ಬಡಿದಾಡಿಕೊಂಡ ಘಟನೆ ನೆಲಮಂಗಲದ ರಾಷ್ಟೀಯ ಹೆದ್ದಾರಿ ೪ ರ ಪಕ್ಕದ ಬಾವಿಕೆರೆ ಕ್ರಾಸ್ ಬಳಿ ನಿನ್ನೆ ನಡೆದಿದೆ.
ಚಿಕ್ಕಬಿದರಕಲ್ಲುವಿನ ಮೂರ್ತಿ ಮತ್ತು ಚಾಮಗೊಂಡ್ಲು ಹೋಬಳಿಯ ಭೈರನಾಯಕನಹಳ್ಳಿಯ ಸಿದ್ದು ಬಡಿದಾಡಿಕೊಂಡಿದ್ದು ಇದನ್ನು ನೋಡಿದ ಸ್ಥಳೀಯರು ಇಬ್ಬರನ್ನು ಜಗಳದಿಂದ ಬಿಡಿಸಿದ್ದಾರೆ. ಮೊದಲೇ ವಿವಾಹವಾಗಿ ವಿಚ್ಛೇದನ ಪಡೆದಿದ್ದ ಮಹಿಳೆ ಮತ್ತು ಮೂರ್ತಿ ಸ್ನೇಹಿತರಾಗಿದ್ದರು.
ಈಗಾಗಲೇ ಮೂರ್ತಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಆದರೆ, ವಿಚ್ಛೇದಿತೆ ಮಹಿಳೆ ಮೂರ್ತಿ ನನ್ನನ್ನು ವಿವಾಹವಾಗಲ್ಲ ಎಂದು ತಿಳಿದು ಆತನಿಂದ ದೂರವಾಗಿದ್ದಳು. ಬಳಿಕ ಭೈರನಾಯಕನಹಳ್ಳಿ ಗ್ರಾಮದ ಸಿದ್ದು ಎಂಬಾತನ ಪರಿಚಯವಾಗಿದೆ. ನಂತರ ಮಹಿಳೆ ಮತ್ತು ಸಿದ್ದು ನಡುವೆ ಸ್ನೇಹ ಬೆಳೆದಿದೆ. ಹೀಗಾಗಿ ಮೂರ್ತಿ ಮತ್ತು ಸಿದ್ದು ಬಡಿದಾಡಿಕೊಂಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment