ಒಬ್ಬರ ರಕ್ತದಾನ ನಾಲ್ವರ ಪ್ರಾಣ ಉಳಿಸುತ್ತದೆ: ಡಾ.ಗಣಜಲಖೇಡ

ಕಲಬುರಗಿ,ಜೂ.19- ಒಬ್ಬರ ಮಾಡುವ ರಕ್ತದಾನದಿಂದ ನಾಲ್ವರ ಪ್ರಾಣ ಉಳಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿ ಡಾ.ಶರಣಬಸಪ್ಪಾ ಗಣಜಲಖೇಡ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಏಡ್ಸ ಪ್ರಿವೆನಷನ್ ಮತ್ತು ನಿಯಂತ್ರಣ ಸಂಸ್ಥೆ, ರೇಡ್ ಕ್ರಾಸ್-ರೆಡ್ ರಿಬ್ಬನ ಸಂಸ್ಥೆ, ಹಾಗೂ ಸರ್ಕಾರಿ ನರ್ಸಿಂಗ್ ಕಾಲೇಜು ಆಶ್ರಯದಲ್ಲಿಂದು ನಗರದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತ ನೀಡಿ, ಈಗ ನೀಡಿ, ಪದೇಪದೇ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಬ್ಬರು ಮಾಡುವ ರಕ್ತದಾನದಲ್ಲಿರುವ ಹಲವಾರು ಕಣಗಳನ್ನು ಬೇರ್ಪಡಿಸಿ ಅಗತ್ಯ ಇರುವವರಿಗೆ ನೀಡುವ ಮೂಲಕ ಕನಿಷ್ಟ ಪಕ್ಷ ನಾಲ್ವರ ಪ್ರಾಣ ರಕ್ಷಣೆಗೆ ಸಹಕಾರಿಯಾಗಲಿದೆ ಎಂದರು.
ರಕ್ತ ದಾನ ಮಾಡುವುದರಿಂದ ಹಲವಾರು ಉಪಯೋಗಗಳಿವೆ, ದೇಹದಲ್ಲಿನ ಕೋಬ್ಬು ಕರಗುತ್ತದೆ, ಹೃದಯ ಸಂಬಂಧಿಸಿದ ರೋಗಗಳಿಂದ ರಕ್ಷಣೆ ಸಿಗುತ್ತದೆ ಎಂದರು.
ರಕ್ತದಾನ ಮಾಡಲು ಬಹುತೇಕ ಜನರು ಹಿಂಜರಿಯುತ್ತಾರೆ, ಜಿಲ್ಲಾ ಆಸ್ಪತ್ರೆಗಳಿಗೆ ಬರುವ ಹೆರಿಗೆ ಮತ್ತು ಸಿಸರಿನ ಶಸ್ತ್ರ ಚಿಕಿತ್ಸೆಗೆ ಒಳಪಡುವ ರೋಗಿಗಳೊಂದಿಗೆ ಸರಿಸುಮಾರು 10-15ಜನರು ಬರುತ್ತಾರೆ ಇವರಿಗೆ ತುರ್ತು ಪರಿಸ್ಥಿತಿಯಲ್ಲಿ ಬೇಕಾಗುವ ರಕ್ತದ ಅಗತ್ಯದ ಬಗ್ಗೆ ಹೇಳಿದಾಗ ಅಲ್ಲಿ ಯಾರು ಕಾಣಸಿಗುವುದಿಲ್ಲ. ತಾವು ರಕ್ತ ನೀಡಿದರೆ ನಿಶಕ್ತಿಬರುತ್ತದೆ ಎಂಬ ಭ್ರಮೆ ಅವರಲ್ಲಿದೆ ಎಂದರು.
ಅತಿ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳಾದ ಸಹಾಯ ಅಧ್ಯಾಪಕ ಶಶಿಕಾಂತ ಮಜ್ಜಿಗೆ, ಬಸವರಾಜ ಅಂಬಾರಾಯ ಸ್ಟಾಪನರ್ಸ ಮತ್ತು ಪದವಿ ವಿದ್ಯಾರ್ಥಿ ಸಚೀನ ಮಲ್ಲಪ್ಪ ಅವರನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಸುವರ್ಣ ಹಣಮಂತರಾಯ ಮಾಲಜಿ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮ್ಮಲ್ಲಯ್ಯಾ ಹಿರೇಮಠ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಶಸ್ತ್ರತಜ್ಞ ಡಾ.ಬಾಲಚಂದ್ರ ಜೋಶಿ ವೇದಿಕೆ ಮೇಲಿದ್ದರು. ನಾಗಿಣಿ ಪ್ರಾರ್ಥನಾ ಗೀತೆ ಹಾಡಿದರು, ಡಾ.ಗಣಜಲಖೇಡ ಸ್ವಾಗತಿಸಿದರು.
ರಕ್ತದಾನಿ ಶಶಿಕಾಂತ ಮಜ್ಜಿಗೆ ಮಾತನಾಡಿ, ರಕ್ತಾದನಿಗಳಿಗೆ ಸನ್ಮಾನಿಸುವ ಮೂಲಕ ಅವರಲ್ಲಿ ರಕ್ತದಾನದ ಬಗ್ಗೆ ಉತ್ತೆಜನ ನೀಡಿದಂತಾಗುತ್ತಿದೆ, ಇದು ಅನ್ಯರಿಗೂ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಜಿಪಂ ಅಧ್ಯಕ್ಷ ಸುವರ್ಣ ಮಾಲಾಜಿ ಚಾಲನೆ ನೀಡಿದರು. ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವಕಿ ಹಿರೇಮಠ ಅವರು ರಕ್ತದಾನಿಗಳಿಗೆ ಸನ್ಮಾನಿಸಿದರು, ನಂತರ ಸರ್ಕಾರಿ ನರ್ಸಿಂಗ ಕಾಲೇಜಿನ 13 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

Leave a Comment