ಒತ್ತುವರಿ ಭೂಮಿ ತೆರವಿಗೆ ಮನವಿ

ರಾಯಚೂರು.ಮಾ.20- ಮಾನ್ವಿ ತಾಲೂಕಿನ ಗೂಗೇಬಾಳ ಗ್ರಾಮದ ಸರ್ವೆ ನಂ. 86,87ರ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ, ಮೂಲ ವಾರಸುದಾರರಿಗೆ ಜಮೀನು ಹಸ್ತಾಂತರಿಸುವಲ್ಲಿ ಅಧಿಕಾರಿಗಳು ಅರ್ಜಿದಾರರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆಂದು ರೈತ ಸಂಘದ ಮುಖಂಡ ಡಿ. ವೀರನಗೌಡ ದೂರಿದರು.

ಮಾನ್ವಿ ತಾಲೂಕಿನ ಗೂಗೇಬಾಳ ಸೀಮಾಂತರದ ಸರ್ವೆ ನಂ. 86,87 ಭೂಮಿಯನ್ನು ಹದ್ದು ಬಸ್ತಿನಲ್ಲಿಡಲು ಸರ್ವೆ ನಡೆಸುವಂತೆ 2015 ಮೇ 18 ರಂದು ಅರ್ಜಿ ಸಲ್ಲಿಸಿದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಮೇಲ್ಕಂಡ ಭೂಮಿಯನ್ನು ಸರ್ವೆ ನಡೆಸದಂತೆ ಕೆಲ ಪ್ರಭಾವಿ ರಾಜಕೀಯ ಮುಖಂಡರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಕುರಿತು ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರರು ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಒತ್ತುವರಿ ಮಾಡಿಕೊಂಡಿರುವ ಸ್ಥಳ ತೆರವುಗೊಳಿಸಿ, ಮೂಲ ವಾರಸುದಾರರಾದ ಬಸವರಾಜ್ ಅವರ ಕುಟಟುಂಬಕ್ಕೆ ನ್ಯಾಯಒದಗಿಸಿಕೊಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

Leave a Comment