ಒತ್ತಡದ ಬದುಕು ಬೇಡ: ಡಾ. ಜೈನ

ಅಳ್ನಾವರ, ಫೆ 11-  ಅಧುನಿಕ ಜೀವನ ಪದ್ದತಿ ಹಾಗೂ ಒತ್ತಡದ ಬದುಕು ಸಕ್ಕರೆ ಕಾಯಿಲೆಗೆ ಅಹ್ವಾನ ನೀಡುತ್ತದೆ ಎಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈಧ್ಯ ಡಾ. ನಿತೇಶ ಜೈನ ಹೇಳಿದರು.
ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಶಿವಾ ರಕ್ತ ತಪಾಸಣಾ ಕೇಂದ್ರದವರ ಆಶ್ರಯದಲ್ಲಿ ಸ್ಥಳಿಯ ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡ ಉಚಿತ ಮಧುಮೇಹ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಪ್ರತಿ ಹತ್ತು ಜನರಲ್ಲಿ ಆರು ಜನರಿಗೆ ಮಧುಮೇಹ ಇದೆ. ಪ್ರಪಂಚದಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿದ 3 ನೆ ದೊಡ್ಡ ರಾಷ್ಟ್ರ ಭಾರತ. ಉತ್ಕೃಷ್ಟ ಜೀವನ ಪದ್ದತಿ ಬೆಳೆಸಿಕೊಂಡು ಬರುವ ದಿನಗಳಲ್ಲಿ ಸಕ್ಕರೆ ಕಾಯಿಲೆಯಿಂದ ದೂರವಾದ ಸಮಾಜ ಕಟ್ಟೋಣ ಎಂದರು.
ಸ್ಥಳೀಯ ವೈಧ್ಯರ ಸಂಘದ ಅಧ್ಯಕ್ಷ ಡಾ. ಬಸವರಾಜ ಮೂಡಬಾಗಿಲ್ ಮಾತನಾಡಿ, ಇಂತಹ ಶಿಬಿರದ ಲಾಭ ಪಡೆದುಕೊಳ್ಳಿ, ನಿತ್ಯ, ಯೋಗ, ಧ್ಯಾನ ಮಾಡಬೇಕು. ವಾಕಿಂಗ್ ಮಾಡುವಾಗ ಯಾವುದೆ ಆಲೋಚನೆಗಳು ಇರಬಾರದು. ಮನಸ್ಸು ನಿರ್ಮಲವಾಗಿರಬೇಕು ಎಂದರು.
102 ಕ್ಕೂ ಹೆಚ್ಚು ರೋಗಿಗಳನ್ನ ತಪಾಸಣೆ ಮಾಡಲಾಯಿತು. ಅಳ್ನಾವರ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿ ಜನರು ಭಾಗವಹಿಸಿದ್ದರು. ಗಣ್ಯರಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಡಾ.ಅಶೋಕ ಕುಂಟನ್ನವರ ಡಾ.ಜಿ.ಎಸ್. ಹಿರೇಮಠ, ಡಿ.ಬಿ. ಪಾಟೀಲ, ಎಸ್.ಬಿ. ಪಾಟೀಲ, ಬಿ.ಎ. ಪಾಟೀಲ, ಪ್ರೇಮನಾಥ ಜಿತೂರಿ, ಕೆ.ಪಿ.ತಿಪ್ಪೇಶಿ, ಆರ್.ಜಿ. ಹಿರೇಮಠ, ಮಂಜುನಾಥ ಬಾಳೆಕುಂದ್ರಿ, ಡಾ. ಆರ್.ಆರ್. ಬಿಜಾಪೂರ, ಐ.ಸಿ .ಹಸಬಿಮಠ, ಯುಹಾನ ಸಿಂಗನಮು, ಆರ್.ಆರ್ .ಬಿಜಾಪೂರ ಇದ್ದರು.

Leave a Comment