ಒಡೆದ ಮನಸ್ಸುಗಳ ಒಂದು ಮಾಡುವುದೇ ಲೋಕ ಅದಾಲತ್:ಖಾಸಿಂ ಚೂರಿಖಾನ್

ಬಳ್ಳಾರಿ, ಸೆ.8: ಕೆಲವು ಸಣ್ಣ ಪುಟ್ಟ ಕಾರಣ, ಘಟನೆಗಳಿಂದ ಒಡೆದ ಮನಸ್ಸುಗಳನ್ನು ರಾಜಿಸಂಧಾನದ ಮೂಲಕ ಒಂದು ಮಾಡುವುದೇ ಲೋಕ ಅದಾಲತ್ ಎಂದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಖಾಸಿಂ ಚೂರಿಖಾನ್ ಹೇಳಿದರು.

ಅವರಿಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವುದೇ ಶುಲ್ಕವಿಲ್ಲದೆ, ಅತೀ ಶೀಘ್ರದಲ್ಲಿ ಪ್ರಕರಣ ವಿಲೇವಾರಿ ಜೊತೆಗೆ ಮೇಲ್ಮನವಿಗೆ ಅವಕಾಶವಿಲ್ಲದೆ ಈ ನ್ಯಾಯಾಲಯದ ತೀರ್ಪು ಕಕ್ಷಿದಾರರಿಗೆ ಬಹು ಸಹಕಾರಿ. ಇತರೇ ನ್ಯಾಯಾಲಯಗಳಲ್ಲಿ ಒಬ್ಬರು ಸೋತರೆ ಮತ್ತೊಬ್ಬರು ಗೆಲ್ಲುತ್ತಾರೆ. ಆದರೆ ಈ ಲೋಕ ಅದಾಲತ್ ನಲ್ಲಿ ಇಬ್ಬರಿಗೂ ಜಯ ಎಂದರು.

ಇಂದು ವ್ಯಾಜ್ಯ ಪೂರ್ವ 247, ಬ್ಯಾಂಕ್ ಬಾಕಿ ವಿಲೇವಾರಿಯ 268, ವಿದ್ಯುತ್ ಕಳ್ಳತನದ 100, ಕ್ರಿಮಿನಲ್ ರಾಜಿಸಂಧಾನದ 145, ಕೌಟುಂಬಿಕ ಸಮಸ್ಯೆಗಳ 11, ಕಾರ್ಮಿಕ ಸಮಸ್ಯೆಯ 01 ಮತ್ತು ಅಪಘಾತ ಪರಿಹಾರಕ್ಕೆ ಸಂಬಂಧಿಸಿ 205 ಸೇರಿದಂತೆ ಒಟ್ಟು 10206 ಪ್ರಕರಣಗಳ ವಿಚಾರಣೆ ಹೆಚ್ಚು ಪ್ರಕರಣಗಳು ಇಂದೇ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ ಎಂದರು.

ಇಂದಿನ ಪ್ರಕರಣಗಳ ವಿಚಾರಣೆಯಲ್ಲಿ ತಾವು ಸೇರಿದಂತೆ ನ್ಯಾಯಾಧೀಶರುಗಳಾದ ವಿಫಲ ಪೂಜಾರಿ, ವೀಣಾನಾಯ್ಕರ್, ಅಶ್ವಿನಿ ಕೋರೆ, ರಾಜ ಸೋಮಶೇಖರ್ ಮುರುಗೇಂದ್ರ ತುಬಾಕೆ, ಹಾರ ಎನ್.ಬಿ.ಹಂದ್ರಾಳ್ ಅವರು ಪಾಲ್ಗೊಂಡಿದ್ದಾರೆಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ರವಿರಾಜಶೇಖರರೆಡ್ಡಿ ಉಪಸ್ಥಿತರಿದ್ದರು.

Leave a Comment