ಒಂಭತ್ತು ಐಸಿಸ್ ಉಗ್ರರ ಹತ್ಯೆ

ಬಾಗ್ದಾದ್, ಸೆ 4  – ಇರಾಕ್‌ ಉತ್ತರದ ನಾಯಿನ್ ವೇ ಪ್ರಾಂತ್ಯದಲ್ಲಿ ಭದ್ರತಾ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಒಂಭತ್ತು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರು ಹತರಾಗಿದ್ದಾರೆ

ಇರಾಕ್ ಸೈನ್ಯದ ಜಂಟಿ ಕಾರ್ಯಾಚರಣೆಯ ಕಮಾಂಡರ್ ವಕ್ತಾರ ಯಾಹ್ಯಾ ರಸೂಲ್ ಮಂಗಳವಾರ ಈ ಮಾಹಿತಿ ನೀಡಿದ್ದಾರೆ.

ಇರಾಕ್ ಸೇನೆಯು, ಅಮೆರಿಕಾ ನೇತೃತ್ವದ ಅಂತಾರಾಷ್ಟ್ರೀಯ ಒಕ್ಕೂಟದ ಸಹಾಯದಿಂದ ಫಾಲ್ಕನ್ ಇಕಾಯಿ, ರಾಜಧಾನಿ ಮೊಸುಲ್‌ನ ಅಲ್-ಸಾಹ್ಜಿ ಪ್ರದೇಶದಲ್ಲಿ ಸುರಂಗವೊಂದನ್ನು ಧ್ವಂಸಗೊಳಿಸಿ, ಒಂಬತ್ತು ಐಎಸ್ ಉಗ್ರರನ್ನು ಹತ್ಯೆ ಮಾಡಿದೆ ಎಂದು ತಿಳಿಸಿದ್ದಾರೆ

ಇರಾಕ್‌ ಸೇನೆಯೂ 2017ರಲ್ಲಿ ಐಸಿಸ್ ಉಗ್ರರನ್ನು ಸಂಪೂರ್ಣವಾಗಿ ಸೋಲಿಸಿದಾಗಿನಿಂದ ಭದ್ರತಾ ಪರಿಸ್ಥಿತಿ ಸಾಕಷ್ಟು ಸುಧಾರಿಸಿತ್ತು. ಆದರೀಗ ಮತ್ತೆ ಭಯೋತ್ಪಾದಕರು ದೂರದ ನಿರ್ಜನ ಪ್ರದೇಶಗಳಲ್ಲಿ ಆಶ್ರಯ ಪಡೆಯುವ ಮೂಲಕ ಆಗಾಗ ನಾಗರಿಕ ಮತ್ತು ಭದ್ರತಾ ಪಡೆಗಳ ಮೇಲೆ ಗೆರಿಲ್ಲಾ ದಾಳಿ ನಡೆಸುತ್ತಿರುತ್ತಾರೆ ಎಂದು ತಿಳಿದು ಬಂದಿದೆ

 

Leave a Comment