ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಹೆಂಡತಿ, ಮಕ್ಕಳಿಗೆ ವಿಷ ಉಣಿಸಿ, ನೇಣಿಗೆ ಶರಣು

ಕೊಪ್ಪಳ, ಜ.5: ಒಂದೇ ಕುಟುಂಬ 6 ಜನ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಕೊಪ್ಪಳ ತಾಲೂಕು ಮೆತಗಲ್ ಗ್ರಾಮದಲ್ಲಿ ಜರುಗಿದೆ.

ಶೇಖರಯ್ಯ ಬೀಡನಾಳ(42) ಜಯಮ್ಮ(39), ಮಕ್ಕಳಾದ ಬಸಮ್ಮ(23), ಗೌರಮ್ಮ(20), ಸಾವಿತ್ರಿ(18), ಪಾರ್ವತಿ(16) ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು.

ಶೇಖರಯ್ಯ ಪತ್ನಿ ಮತ್ತು ನಾಲ್ವರು ಮಕ್ಕಳಿಗೆ ಪಾನೀಯಾದಲ್ಲಿ ವಿಷ ಕುಡಿಸಿ, ತಾನೂ ನೇಣು ಹಾಕಿಕೊಂಡು ಆತ್ಮಹತ್ನೆ ಮಾಡಿದ್ದಾನೆ.

ಶೇಖರಯ್ಯ ಮೂಲತಃ ಕೃಷಿ ಕೂಲಿಕಾರ. ಇತ್ತೀಚಿಗೆ ಹಿರಿಯ ಹೆಣ್ಣು ಮಕ್ಕಳಾದ ಬಸಮ್ಮ ಮತ್ತು ಗೌರಮ್ಮ ಅವರನ್ನು ಮದುವೆ ಮಾಡಿಕೊಟ್ಟಿದ್ದ. ಈ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಲು ಶೇಖರಯ್ಯ ತನ್ನ ಗ್ರಾಮದಲ್ಲಿ ಸಾಲ ಮಾಡಿಕೊಂಡಿದ್ದ. ಅಲ್ಲದೆ, ಮೂರನೇ ಮಗಳು ಸಾವಿತ್ರಿಗೂ ಸಹ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಸಾವಿತ್ರಿ ಮದುವೆ ಮಾಡಲು ಗ್ರಾಮದಲ್ಲಿ ಕೆಲವರನ್ನು ಸಾಲ ಕೇಳಿದ್ದನು ಎಂದು ತಿಳಿದು ಬಂದಿದೆ.

ಶೇಖರಯ್ಯ ಸುಮಾರು 6 ಲಕ್ಷ ರೂ. ಸಾಲ ಮಾಡಿಕೊಂಡಿದ್ದನು ಎಂದು ಹೇಳಲಾಗಿದ್ದು, ಸಾಲದ ಬಾಧೆ ತಾಳದೇ ಆತ್ಮಹತ್ಮೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಈ ಬಗ್ಗೆ ಕೊಪ್ಪಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕೃಷಿ ಸಚಿವ ಭೇಟಿ:
ಸುದ್ದಿ ತಿಳಿಯುತ್ತಿದ್ದಂತೆಯೇ ಕೃಷಿ ಸಚಿವ ಎಲ್. ಶಿವಶಂಕರ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಅವರು, ಒಂದೇ ಕುಟುಂಬದಲ್ಲಿ 6 ಜನ ಆತ್ಮಹತ್ಯೆ ಮಾಡಿಕೊಂಡಿರುವುದು ಧಾರುಣ ಘಟನೆ. ಈ ರೀತಿ ಘಟನೆ ಆಗಬಾರದಿತ್ತು. ಸರಕಾರದಿಂದ ಪರಿಹಾರ ಕೊಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು.

ಶೇಖರಯ್ಯ ಸಾಲದ ಬಾಧೆಯಿಂದ ಮೃತ ಪಟ್ಟಿರುವುದಾಗಿ ಮೇಲ್ಮೋಟಕ್ಕೆ ಕಂಡು ಬರುತ್ತದೆ. ಆದರೆ, ತನಿಖೆ ನಂತರ ನಿಖರ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.

Leave a Comment