ಒಂದೂವರೆ ತಿಂಗಳ ಹೆಣ್ಣು ಮಗುವನ್ನು ನೀರಿನ ಸಂಪ್‍ಗೆ ಎಸೆದು ಹತ್ಯೆ

ಕೋಲಾರ ಫೆ,19- ಒಂದೂವರೆ ತಿಂಗಳ ಹೆಣ್ಣು ಮಗುವನ್ನು ಮನೆಯಿಂದ ಅಪಹರಿಸಿ ನೀರಿನ ಸಂಪಿಗೆ ಎಸೆದು ಹತ್ಯೆ ಮಾಡಿರುವ ದುರ್ಘಟನೆ ನಗರ ಹೊರವಲಯದ ಛತ್ರಕೋಡಿಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ರಘುಪತಿ ಮತ್ತು ಹರ್ಷಿತ ದಂಪತಿಗಳ ಒಂದೂವರೆ ತಿಂಗಳ ಹಸುಗೊಸು ಹೆಣ್ಣು ಮಗುವು ಬೆಳಿಗ್ಗೆ 10 ಗಂಟೆಗೆ ನಾಪತ್ತೆಯಾಗಿದ್ದು ಸಂಜೆಯ ವೇಳೆಗೆ ಮಗುವಿನ ಶವ ನೀರಿನ ಸಂಪಿನಲ್ಲಿ ಪತ್ತೆಯಾಗಿದೆ.
ಸುದ್ದಿ ತಿಳಿದ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಅಗಮಿಸಿ, ಶ್ವಾನದಳವನ್ನು ಕರೆಸಿದಾಗÀ ಅದು ಮನೆಯ ಸಮೀಪವಿದ್ದ ನೀರಿನ ಸಂಪಿನ ಸುತ್ತ ಗಿರಕಿ ಹೊಡೆಯುವ ಮೂಲಕ ಸುಳಿವು ನೀಡಿದ್ದನ್ನು ಕಂಡು ಪೋಲಿಸರು ನೀರಿನ ಸಂಪಿನ ಬಾಗಿಲನ್ನು ತೆಗೆದು ನೋಡಿದಾಗ ಮಗುವಿನ ಶವ ಪತ್ತೆಯಾಗಿದೆ.
ಪ್ರಕರಣ-
ಗ್ರಾಮದ ಮುನಿರಾಜು ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದ ರಘುಪತಿ ಬೆಂಗಳೂರಿನ ವೈಟ್‍ಫೀಲ್ಡ್‍ನ ಜೆಮಿನಿ ಅಯಿಲ್ ಕಂಪನಿಯಲ್ಲಿ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು.
ದಂಪತಿಗಳು ಓಂಶಕ್ತಿ ದೇವಾಲಯದ ಪೂಜೆಗೆಂದು ತೆರಳಿದ್ದರು.ಈ ಸಂದರ್ಭದಲ್ಲಿ ಮನೆಯಲ್ಲಿ ಅಜ್ಜಿ ರತ್ಮಮ್ಮ ಮಗುವನ್ನು ನೋಡಿ ಕೊಳ್ಳುತಿದ್ದರು. ಮೊಮ್ಮಗ 3 ವರ್ಷದ ಚಂದನ್ ಮನೆಯಿಂದ ಹೊರಗಡೆ ಹೋದಾಗ ಅತನನ್ನು ಕರೆದು ಕೊಂಡು ವಾಪಾಸ್ ಬರುವಷ್ಟರಲ್ಲಿ  ಮನೆಯಲ್ಲಿದ್ದ ಒಂದೂವರೆ ವರ್ಷದ ಹಸುಗೊಸು ನಾಪತ್ತೆಯಾಗಿತ್ತು ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದರು.
ಗ್ರಾಮಾಂತರ ಠಾಣೆಯ ಸಿ.ಐ. ಅಂಜನಪ್ಪ ಹಾಗೂ ಎಸ್.ಐ. ಪ್ರದೀಪ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ದುಷ್ಕರ್ಮಿಗಳು ಮಗುವನ್ನು ಉದ್ದೇಶ ಪೂರ್ವಕವಾಗಿ ನೀರಿಗೆ ಸಂಪಿಗೆ ಎಸೆದು ಹತ್ಯೆ ಮಾಡಿದ್ದಾರೆಂದು ಶಂಕಿಸಲಾಗಿದೆ.
ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿಚಾರಣೆಗೆ ಕುಟುಂಬದವರಾದ ರತ್ನಮ್ಮ, ರಘುಪತಿ, ಮತ್ತು ಹರ್ಷಿತ ಅವರ ಬಳಿ ವಿವರಗಳನ್ನು ಪಡೆಯುವ ಮೂಲಕ ತನಿಖೆಯನ್ನು ಮುಂದುವರೆಸಿದ್ದಾರೆ.

Leave a Comment