ಒಂದು ಸಾವಿರಕ್ಕಾಗಿ ಮೃತದೇಹ ಕೊಡದೆ ಸತಾಯಿಸಿದ ಸಿಬ್ಬಂದಿ

ಮೈಸೂರು,ಮಾ.೧೫-ಒಂದು ಸಾವಿರ ರೂ. ಬಾಕಿ ಹಣಕ್ಕಾಗಿ ಆಸ್ಪತ್ರೆಯವರು ಮೃತದೇಹ ಕೊಡದೇ ಸತಾಯಿಸಿದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಸರಗೂರಿನ ವಿವೇಕಾನಂದ ಆಸ್ಪತ್ರೆಯಲ್ಲಿ ನಡೆದಿದೆ.

೧ ಸಾವಿರ ಹಣ ಪಾವತಿಸಿ ನಂತರ ಮೃತದೇಹ ಪಡೆದುಕೊಳ್ಳಿ ಎಂದು ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಅಧಿಕಾರಿಗಳು ಹೇಳುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಪ್ರಭನಗರ ಹಾಡಿಯ ಜೇನು ಕುರುಬ ಮಹಿಳೆ ಚಂದ್ರಿಕಾ ನಾಲ್ಕು ದಿನದ ಹಿಂದೆ ಮೂರ್ಛೆ ರೋಗದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.

ಚಂದ್ರಿಕಾ ಆಸ್ಪತ್ರೆಗೆ ದಾಖಲಾಗುವ ವೇಳೆ ೩ ಸಾವಿರ ಹಣ ಕಟ್ಟಲಾಗಿತ್ತು. ಚಂದ್ರಿಕಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆಗ ಆಸ್ಪತ್ರೆ ಅಧಿಕಾರಿಗಳು ಬಿಲ್‌ಗೆ ಸಂಬಂಧಿಸಿದ ೧ ಸಾವಿರ ಬಾಕಿ ಹಣ ಕಟ್ಟಿ ಶವವನ್ನು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಆದರೆ ನಮ್ಮ ಬಳಿ ಹಣ ಇಲ್ಲ ಶವ ಕೊಡಿ ಎಂದರು ಅಧಿಕಾರಿಗಳು ಅದಕ್ಕೆ ಒಪ್ಪಿಲ್ಲ.

ಕೊನೆಗೆ ಸ್ಥಳೀಯ ಹೋರಾಟಗಾರರು ಉಳಿದ ೧ ಸಾವಿರ ಹಣ ಪಾವತಿಸಿ ಶವ ಪಡೆದ ಕುಟುಂಬಸ್ಥರು ನೀಡಿದ್ದಾರೆ.

Leave a Comment