ಒಂದು ವರ್ಷ ಪೂರೈಸಿದ ಎನ್‍ಡಿಎ ಸರ್ಕಾರ : ಪ್ರಧಾನಿಗೆ ನಡ್ಡಾ ಅಭಿನಂದನೆ

ನನವದೆಹಲಿ, ಮೇ 30 – ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ 2ನೇ ಅವಧಿಯ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿರುವ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಪ್ರಧಾನಿಯನ್ನು ಅಭಿನಂದಿಸಿದ್ದಾರೆ.
ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ಸರ್ವವನ್ನೂ ಸಮರ್ಪಿಸಿದ್ದಾರೆ ಎಂದಿರುವ ನಡ್ಡಾ, ಕೋಟ್ಯಂತರ ಬಿಜೆಪಿ ಕಾರ್ಯಕರ್ತರ ಪರವಾಗಿ, ಅವರ ಸರ್ಕಾರದ ಐತಿಹಾಸಿಕ ಮತ್ತು ಅಭೂತಪೂರ್ವ ಒಂದು ವರ್ಷ ಪೂರ್ಣಗೊಂಡಿದ್ದಕ್ಕಾಗಿ ಅಭಿನಂದಿಸುತ್ತೇನೆ. ದೇಶ ನಿರ್ಮಾಣದ ಕಾರ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿಯವರನ್ನು ಬೆಂಬಲಿಸುತ್ತೇವೆ ‘ಎಂದು ಟ್ವೀಟ್ ಮಾಡಿದ್ದಾರೆ.
ಮೋದಿ ಸರ್ಕಾರದ ಈ ಒಂದು ವರ್ಷ ಅನೇಕ ಸಾಧನೆಗಳಿಂದ ತುಂಬಿದೆ. ದೂರದೃಷ್ಟಿಯ ನೀತಿಗಳ ಜತೆಗೆ, ಟೀಮ್ ಇಂಡಿಯಾದ ಮನೋಭಾವವನ್ನು ಬಲಪಡಿಸುವ ಮೂಲಕ ಮೋದಿ ಅವರು ದೇಶದ ಪ್ರಜಾಪ್ರಭುತ್ವಕ್ಕೆ ಹೊಸ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

“ಸಾರ್ವಜನಿಕ ಹಿತಾಸಕ್ತಿ, ದೇಶದ ಕಲ್ಯಾಣದ ಹಪಹಿ ಮತ್ತು ಕಟ್ಟಕಡೆಯ ವ್ಯಕ್ತಿಯ ಜೀವನ ಸುಧಾರಣೆಯ ಇಚ್ಛಾಶಕ್ತಿ ಸರ್ಕಾರದ ಪ್ರತಿಯೊಂದು ನಿರ್ಧಾರದಲ್ಲೂ ಕಂಡುಬರುತ್ತದೆ” ಎಂದು ನಡ್ಡಾ ಹೇಳಿದ್ದಾರೆ.

Share

Leave a Comment