ಒಂದು ಪುಸ್ತಕ ಒಂದು ದೇಶವನ್ನು ಆಳುತ್ತದೆ : ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿ

ಧಾರವಾಡ ಜು.15-ರತಿಕಾ ನೃತ್ಯ ನಿಕೇತನ ಧಾರವಾಡ ಹಾಗು ಸಾಯಿರಾಮನ್ ನೃತ್ಯ ಕೇಂದ್ರ ತುಮಕೂರು ಸಹಯೋಗದಲ್ಲಿ ನೃತ್ಯಾರ್ಪಣ ಕಾರ್ಯಕ್ರಮ ಹಾಗೂ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದವರು ನಡೆಸುವ ಪರೀಕ್ಷೆಗಳ ಕುರಿತಾಗಿ ನಾಲ್ಕು ಸಂಪುಟದ ಪಠ್ಯಪುಸ್ತಕಗಳನ್ನು ತುಮಕೂರಿನ ಅಂತರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಸಾಗರ್ ಟಿ.ಎಸ್ ರಚಿಸಿದ ನಾಟ್ಯರಂಗ, ನಾಟ್ಯ ಮಾಧ್ಯಮ, ನಾಟ್ಯ ವಿಶಾರದ, ನಾಟ್ಯಾಲಂಕಾರ ಇವುಗಳ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಕಟಿತವಾದ ಪುಸ್ತಕಗಳ ಲೋಕಾರ್ಪಣೆ ಇತ್ತೀಚೆಗೆ  ಧಾರವಾಡದ ಆಲೂರು ವೆಂಕಟರಾವ ಸಭಾಭವನದಲ್ಲಿ ಬಿಡುಗಡೆ ಮಾಡಲಾಯಿತು.
ಪುಸ್ತಕ ಬಿಡುಗಡೆಯನ್ನು ಹಿರಿಯ ನೃತ್ಯಗಾರ್ತಿ ಡಾ. ತುಳಸಿ ರಾಮಚಂದ್ರ ನಿದೇಶಕರು, ನೃತ್ಯಾಲಯ ಮೈಸೂರು ಇವರು ನೆರೆವೆರಿಸಿ ಮಾತನಾಡಿ ಇಂದು ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದದ್ದು ಇಂದಿನ ಪೀಳಿಗೆಗೆ ಇದೆ ಭರತನಾಟ್ಯದಿಂದ ಮಕ್ಕಳಲ್ಲಿ ಒಳ್ಳೆಯ ಸಂಸ್ಕೃತಿ ಬೆಳೆಯುತ್ತದೆ ಅಲ್ಲದೆ ಇದರಲ್ಲಿ ಒಂದು ಆಗಾದ ಶಕ್ತಿ ಇದೆ ಎಂದು ಈ ಪುಸ್ತಕಗಳು ಉತ್ತಮವಾಗಿದ್ದು ಮಕ್ಕಳಿಗೆ ಸರಿಯಾಗಿ ತಿಳಿಯಲು ಉತ್ತಮವಾಗಿ ಲೇಖಕರು ಬರೆದಿದ್ದು ಪಾಲಕರು ತಮ್ಮ ಮಕ್ಕಳಿಗೆ ಈ ಪುಸ್ತಕಗಳ ಬಗ್ಗೆ ಮನನ ಮಾಡಿಕೊಟ್ಟು ನಮ್ಮ ಸಂಸ್ಕೃತಿಯನ್ನು ಉಳಿಸಲು ಪ್ರೇರೆಪಿಸಬೇಕು ಅಲ್ಲದೆ ಮಕ್ಕಳನ್ನು ಶಾಸ್ತ್ರೀಯ ಕಲೆಗಳಿಗೆ ಹೆಚ್ಚು ಒತ್ತು ಕೊಟ್ಟು ಮಕ್ಕಳಿಗೆ ವಿದ್ಯೆಯನ್ನು ಕಲಿಸಬೇಕು. ಮಕ್ಕಳಿಗೆ ಓದಿನ ಜೊತೆಯಲ್ಲಿ ಕಲೆಗಳಲ್ಲಿ ಆಸಕ್ತಿಯನ್ನು ವಹಿಸುವಂತೆ ಪ್ರೋತ್ಸಾಹಿಸಿ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರತರಬೇಕೆಂದು ನುಡಿದರು
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರಘಾಮಠ, ಧಾರವಾಡ ಇವರು ರತಿಕಾನೃತ್ಯ ನಿಕೇತನ ಈಗಾಗಲೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಇವರಲ್ಲಿ ಕಲಿತ ಅನೇಕ ಮಕ್ಕಳು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದ್ದಾರೆ ಎಂದರು ಅಲ್ಲದೆ ಇಂದು ಪುಸ್ತಕ ಓದುವ ಹವ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಹಾಗೂ ವಿದ್ವಾನ ಸಾಗರ್ ರವರು ಉತ್ತಮವಾದ ಪುಸ್ತಕಗಳನ್ನು ತಮ್ಮ ಮುಂದೆ ನೀಡಿದ್ದಾರೆ ಅವುಗಳ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಉತ್ತಮವಾಗಿ ಬಳಸಿಕೊಳ್ಳಬೇಕು ಈ ನಾಟ್ಯಕಲೆಯಲ್ಲಿ ಅಧಮ್ಯ ಅಗೋಚರ, ಅಪ್ರತಿಮ ಅನ್ನುವ ಎಲ್ಲ ವಿಚಾರಗಳನ್ನು ಈ ಪುಸ್ತಕದಲ್ಲಿ  ಕ್ರೂಢೀಕರಿಸಿದ್ದು ಅದನ್ನು ವ್ಯಾಪಕತೆಯಿಂದ ಬೆಳೆಸಬೇಕು ಒಂದು ಪುಸ್ತಕ ಒಂದು ಜಗತ್ತನ್ನು ಆಳುತ್ತದೆ ಒಂದು ಪುಸ್ತಕ ಒಂದು ದೇಶವನ್ನು ಆಳುತ್ತದೆ ಅನ್ನುವುದಕ್ಕೆ ಭಗವತ್ ಗೀತೆ, ರಾಮಾಯಣ, ಬೈಬಲ್, ಖುರಾನ್ ಪುಸ್ತಕಗಳು ಹೀಗೆ ಅನೇಕ ಪುಸ್ತಕಗಳು ಸಂಸ್ಕೃತಿಯನ್ನು ಬಿಂಬಿಸುತ್ತವೆ ಹೀಗೆ ಪುಸ್ತಕಗಳ ಮಹತ್ವ ಅಧಮ್ಯ ಅಗೋಚರ ಎಂದರು ಇಂದು ಗ್ರಂಥಾಲಯಗಳಲ್ಲಿ ನಾವು ಬೆರಳನಿಕೆಯಷ್ಟು ಜನರು ಓದುವುದನ್ನು ಕಾಣುತ್ತವೆ ಇದು ವಿಷಾದವೆನಿಸುತ್ತದೆ. ಇಂದು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಇದನ್ನು ಉಳಿಸಬೇಕು ಎಂದರು.
ಅಧ್ಯಕ್ವತೆಯನ್ನು ವಹಿಸಿ ಮಾತನಾಡಿದ ಶಿವಾನಂದ ಶೆಟ್ಟರ್ ಮಾತನಾಡಿ ನಾಟ್ಯ ಪರಂಪರೆ ಬೆಳೆಯಬೇಕು ಹಾಗೂ ತಮ್ಮ ಹಾಗೂ ನೃತ್ಯದಲ್ಲಿಯ ಆಸಕ್ತಿ ಬೆಳೆದದ್ದು ಗಾಂಧಿಭವನದಿಂದ ಎಂದು ಈ ಕಲೆಯಲ್ಲಿ ಒಂದು ಅಧ್ಬುತ ಶಕ್ತಿ ಇದೆ ಮಕ್ಕಳು ಬೆಳೆಸಿಕೊಳ್ಳಬೇಕು ಹಾಗೂ ಈ ನಾಲ್ಕು ಪುಸ್ತಕಗಳನ್ನು ಮಕ್ಕಳು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ನುಡಿದರು. ವೇದಿಕೆಯ ಮೇಲೆ ವಿದೂಷಿಯರಾದ ರೋಹಿಣಿ ಇಮಾರತಿ, ಸಹನಾ ಭಟ್, ಹೇಮಾ ವಾಘಮೊಡೆ, ಸೀಮಾ ಕುಲಕರ್ಣಿ, ನಾಗರತ್ನಾ ಹಡಗಲಿ ಹಾಗೂ ಶ್ರೀ ಸಾಯಿರಾಮನ್ ನೃತ್ಯ ಕೇಂದ್ರದ ಅಧ್ಯಕ್ಷರಾದ ಸುಮಾ ಪ್ರಸಾದ, ರತಿಕಾ ಸಾಗರ ಉಪಸ್ಥಿತರಿದ್ದರು, ವಿದೂಷಿ ವಾಣಿ ಉಡುಪಿ ಸ್ವಾಗತ ಗೀತೆ ನಡೆಸಿಕೊಟ್ಟರು, ಪ್ರಮೋದಾ ಉಪಾಧ್ಯಾಯ, ಶೃೃತಿ ಕಟ್ಟಿ ಸಂತೋಷ ಮಹಾಲೆ. ನಾಗರಾಜ ಹಡಗಲಿ ಸಾಗರ ಟಿ.ಎಸ್. ಪ್ರಾಸ್ತಾವಿಕ ಮಾತನಾಡಿದರು ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ರತಿಕಾ ನೃತ್ಯಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಸಾಯಿರಾಮನ್ ನೃತ್ಯಕೇಂದ್ರ ತೂಮಕೂರು ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಜರುಗಿತು. ನಿರೂಪಣೆ ಸುನೀಲ ಕುಲಕರ್ಣಿ ಅಚ್ಚುಕಟ್ಟಾಗಿ ನಡೆಸಿದರು.

Leave a Comment