ಐ ಲವ್ ಯೂ ಚಿತ್ರದಲ್ಲಿ ಬೋಲ್ಡ್ ನಟನೆ- ಕಣ್ಣೀರಿಟ್ಟ ರಚಿತಾ ರಾಮ್

ಬೆಂಗಳೂರು, ಜೂ ೨೨- ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್  ರಚಿತಾ ರಾಮ್ ಅಭಿನಯದ ‘ಐ ಲವ್ ಯೂ” ಚಿತ್ರ ಸದ್ಯ ಚಂದನವನದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಚಿತ್ರದಲ್ಲಿ ಸಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕೆ ರಚಿತಾ ರಾಮ್ ಪೋಷಕರ ಬಳಿ ಕ್ಷಮೆಯಾಚಿಸಿ ಕಣ್ಣೀರಿಟ್ಟಿದ್ದಾರೆ.

’ಐ ಲವ್ ಯೂ’ ಚಿತ್ರದಲ್ಲಿ  ತುಂಬ ಬೋಲ್ಡ್ ಆಗಿ ಅಭಿನಯಿಸಿರುವುದಕ್ಕೆ ಅಪ್ಪ-ಅಮ್ಮನಿಗೆ ಬಹಳ ನೋವಾಗಿದೆ, ಅದಕ್ಕಾಗಿ ಅವರಲ್ಲಿ ನಾನು ಕ್ಷೇಮೆ ಕೇಳುತ್ತೇನೆ ಎಂದು ವಾಹಿನಿ ಸಂದರ್ಶವೊಂದರಲ್ಲಿ  ಕಣ್ಣೀರಿಟ್ಟು ಕ್ಷಮೆಯಾಚಿಸಿದ್ದಾರೆ. ನನ್ನ ಪೋಷಕರು ಈಗಲೂ ನನ್ನನ್ನು ಚಿಕ್ಕ ಮಗುವಿನಂತೆಯೇ ನೋಡಿಕೊಳ್ಳುತ್ತಾರೆ. ನಾನು ತೆರೆಯ ಮೇಲೆ ಈ ರೀತಿ ಕಾಣಿಸಿಕೊಂಡಿದ್ದನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ನಟಿ ರಚಿತಾ ರಾಮ್ ಕಣ್ಣೀರು ಹಾಕಿದ್ದಾರೆ.

ಅಮ್ಮ ಚಿತ್ರವನ್ನು ನೋಡಿ ಬಂದ ಅಪ್ಪನಿಗೆ ಮಾಹಿತಿ ನೀಡಿದ್ದಾರೆ. ಅಮ್ಮ ಹೇಳಿದ ನಂತರ ಅಪ್ಪ ಆ ಸಿನಿಮಾವನ್ನೇ ನೋಡುವುದಿಲ್ಲ ಎಂದು ಬಿಟ್ಟರು. ಮಗಳಾಗಿ ಮಾತ್ರವಲ್ಲ ನನ್ನನ್ನು ಓರ್ವ ನಟಿಯಾಗಿ  ಕೂಡ ಅಷ್ಟು ಬೋಲ್ಡ್ ಆಗಿ ತೆರೆಯ ಮೇಲೆ ನೋಡಲು ಇಷ್ಟಪಡುವುದಿಲ್ಲ ಎಂದು ಅಪ್ಪ ನೇರವಾಗಿಯೇ ಹೇಳಿದರು. ಅವರಿಗೆ ನನ್ನ ಈ ಪಾತ್ರದಿಂದ ಬಹಳ ನೋವಾಗಿದೆ ಎಂದು  ರಚಿತಾ ಕಣ್ಣೀರು ಹಾಕಿದ್ದಾರೆ.

ಇತ್ತೀಚೆಗೆ ಈ ವಿಚಾರಕ್ಕೆ ಪ್ರಿಯಾಂಕಾ ಉಪೇಂದ್ರ ಕೂಡ ರಚಿತಾ ರಾಮ್ ವಿರುದ್ಧ ಗರಂ ಆಗಿ ಪ್ರತಿಕ್ರಿಯಿಸಿದ್ದರು.

Leave a Comment