ಐ.ಎನ್.ಟಿ.ಯು.ಸಿ ಬಳ್ಳಾರಿ ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೆ.ತಾಯಪ್ಪ ನೇಮಕ

ಬಳ್ಳಾರಿ, ಫೆ.11: ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ನ (ಐ.ಎನ್.ಟಿ.ಯು.ಸಿ) ನಗರ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಕೆ.ತಾಯಪ್ಪ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಐ.ಎನ್.ಟಿ.ಯು.ಸಿ.ಯ ಅಧ್ಯಕ್ಷ ರಾಕೇಶ್ ಮಲ್ಲಿ ಅವರ ನಿರ್ದೇಶನದಂತೆ ಬಳ್ಳಾರಿ ನಗರ ಸಮಿತಿಯ ಅಧ್ಯಕ್ಷ ಎಂ.ಜೈಕುಮಾರ್ ನಾಯ್ಡು ಅವರು ತಾಯಪ್ಪ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಮಾಣಿಕ ಮತ್ತು ಸಂಘಟನಾತ್ಮಕವಾಗಿ ಕೈಗೊಂಡು ಪಕ್ಷವನ್ನು ಬಲಪಡಿಸಬೇಕೆಂದಿದ್ದಾರೆ.

ನೇಮಕ ಪತ್ರ ಪಡೆದಿರುವ ತಾಯಪ್ಪ ಅವರು ಪಕ್ಷ ನೀಡಿರುವ ಜವಾಬ್ದಾರಿಯನ್ನು ಸ್ವೀಕರಿಸಿ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಸಮರ್ಥ್ಯವಾಗಿ ನಿಭಾಯಿಸಿ ನಗರದ ವಿವಿಧ ವಾರ್ಡು, ಮತ್ತು ಪ್ರದೇಶಗಳಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸುವುದಾಗಿ ಹೇಳಿದ್ದಾರೆ.

Leave a Comment